ತೆರವಿಗೆ ಮುಂದಾದ ಅಧಿಕಾರಿಗಳಿಗೆ ಮುಖಭಂಗ

0
92

ಮಂಡ್ಯ/ಮಳವಳ್ಳಿ: ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ಯಾವುದೇ ನೋಟಿಸ್ ನೀಡದೆ ಮನೆಯನ್ನು ತೆರವುಗೊಳಿಸಲು ಮುಂದಾದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನೆಯ ಮಾಲೀಕ ಹೈಕೋರ್ಟ್ ನಿಂದ ತೆರವಿಗೆ ತಡೆಯಾಜ್ಞೆ ತರುವ ಮೂಲಕ ಮುಖಭಂಗ ಮಾಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಟ್ಟರಾಮೇಗೌಡರವರಿಗೆ ಸೇರಿದ ಮನೆಯನ್ನು ಸಾರ್ವಜನಿಕ ಸ್ಥಳವನ್ನು ಬಳಿಸಿಕೊಂಡು ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ಪಂಚಾಯತಿ ಇಓ ಹಾಗೂ ಗ್ರಾಮಪಂಚಾಯಿತಿ ಪಿಡಿಒ ನೇತೃತ್ವದಲ್ಲಿ ಹಲಗೂರು ಪೊಲೀಸರು ರಕ್ಷಣೆ ಯಲ್ಲಿ ಹೊಡೆಯಲು ಮುಂದದಾಗ ಅಲ್ಲಿನ ಮನೆಯ ಮಾಲೀಕ ಹಾಗೂ ಗ್ರಾಮಸ್ಥರು ತಡೆದು ಪ್ರತಿಭಟನೆ ವ್ಯಕ್ತ ಪಡಿಸಿದ್ದು.ಸ್ಥಳಕ್ಕೆ ಜಿ.ಪಂ ಸದಸ್ಯ ರವಿ ಸಹ ಆಗಮಿಸಿ , ನೋಟಿಸ್ ನೀಡದೆ ಹೇಗೆ ತೆರವು ಗೊಳಿಸುದ್ದೀರಾ. ಮೂರು ಗಂಟೆ ಕಾಲಾವಕಾಶ ನೀಡುವಂತೆ ಮನವಿ ಮಾಡಿ ಕೊಂಡರೂ ಅವರ ಮಾತನ್ನು ಲೆಕ್ಕಿಸದೆ ಮುಂದಾದಾಗ ಮಾತಿನ‌ಚಕಮುಕಿ ನಡೆಯಿತು. ಕೊನೆಗೆ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ತಾ.ಪಂ ಇಒಗೆ ಮುಖಭಂಗವಾಗಿದ್ದು, ಜೆಸಿಬಿ ಜೊತೆ ವಾಪಸ್ಸು ತೆರಳಿದರು.

ಬೈಟ್ : ಪರಮೇಶ್ವರಪ್ಪ ತಾ.ಪಂ ಇಓ ಬೈಟ್: ಪುಟ್ಟರಾಮೇಗೌಡ ಮನೆ ಮಾಲೀಕ . ಬೈಟ್: ಮನೆ ಮಾಲೀಕನ ಹೆಂಡತಿ

LEAVE A REPLY

Please enter your comment!
Please enter your name here