ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮ..

0
578

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಕಂದಾಯ ಇಲಾಖೆ ಹಾಗೂ ಭೂ ಸಕ್ರಮಣ ಸಮಿತಿಯಿಂದ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶಾಸಕ ಎಂ.ರಾಜಣ್ಣ ಅದ್ಯಕ್ಷತೆಯಲ್ಲಿ 246 ಎಕರೆ ಜಮೀನು ಸುಮಾರು 130 ಕ್ಕೂ ಹೆಚ್ಚು ಪಲಾನುಭವಿಗಳಿಗೆ ಸಾಗುವಳಿ ಚೀಟಿ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು ತಾವು ಪಡೆದ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸಂರಕ್ಷಿಸಿಕೊಳ್ಳಿ ಸರ್ಕಾರದಿಂದ ನೀಡಿರುವಂತ ಜಮೀನನ್ನು ಯಾವುದೇ ಕಾರಣಕ್ಕೂ ಮಾರಲು ಮುಂದಾಗಬಾರದು ಎಂದರು.

ಸಾಗುವಳಿ ಚೀಟಿಯ ಹಕ್ಕುಪತ್ರ ಪಡೆದ ಪಲಾನುಭವಿಗಳು ಸರ್ಕಾರದ ಆದೇಶಗಳು ಉಲ್ಲಂಘನೆ ಮಾಡಿದ ಬೆಳೆಗಳು ಬೆಳೆದರೆ ಮತ್ತೆ ಜಮೀನು ಹಿಂಪಡೆಯಲಾಗುವುದು ಹಾಗೂ ಹಂತ ಹಂತವಾಗಿ ಸಾಗುವಳಿ ಚೀಟಿಗಳನ್ನು ನೀಡುತ್ತಿದ್ದು ಉಳಿದ ಪಲಾನುಭವಿಗಳಿಗೆ ಆದಷ್ಟು ಬೇಗನೇ ವಿತರಣೆ ಮಾಡುವಂತ ಕೆಲಸ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪರಿಕ್ಷಣಾರ್ಥಿ ಏಸಿ ಅಧಿಕಾರಿಯಾದ ಮಮತಕುಮಾರಿ, ಭೂ ಸಕ್ರಮಣ ಸಮಿತಿ ಸದಸ್ಯರಾದ ಅಶ್ವಥನಾರಾಯಣರೆಡ್ಡಿ, ಕೃಷ್ಣಪ್ಪ, ಸದಸ್ಯೆ ಪ್ರಮೀಳಮ್ಮ ಹಾಗೂ ಗ್ರೇಟ್ 2 ತಹಶೀಲ್ದಾರ್, ಹಲವಾರು ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here