ಮನುಷ್ಯನ ಯಾಂತ್ರಿಕ ಜೀವನದ ಮುಕ್ತಿಗೆ ಯೋಗ ಸ್ಫೂರ್ತಿದಾಯಕ.

0
187

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಮನುಷ್ಯನ ಯಾಂತ್ರಿಕ ಜೀವನದ ಮುಕ್ತಿಗೆ ಸಹಲ್ ಕಾರ್ಯಕ್ರಮ ಸ್ಫೂರ್ತಿದಾಯಕ ಎಂದು ಯೋಗ ಶಿಕ್ಷಕ ಜಗದೀಶ್ ಹೇಳಿದರು.ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ಪಟ್ಟಣದ ಹೊರವಲಯದ ಪರಗೋಡು ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಹಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು .

ಪ್ರತಿದಿನ ಒತ್ತಡದಿಂದ ದುಡಿಯುವ ಜನರಿಗೆ ಯೋಗ ಕಾರ್ಯಕ್ರಮ ಒಂದು ವರದಾನವಾಗಿದೆ ಎಂದರು .
ಈ ಕಾರ್ಯಕ್ರಮದಲ್ಲಿ ದೇವನಹಳ್ಳಿ ಚಿಕಬಳ್ಳಾಪುರ ಶಿಡ್ಲಘಟ್ಟ ಕೋಲಾರ ಶಾಖೆಗಳಿಂದ ಅಲ್ಲದೆ ಬಾಗೇಪಲ್ಲಿ ಸುಮಾರು ನೂರಾ ಇಪ್ಪತ್ತಕ್ಕೂ ಎಚ್ ಯೋಗ ಬಂಧುಗಳು ಆಗಮಿಸಿ ಸಹ ಯೋಗಾಭ್ಯಾಸ ಸಹ ಪ್ರಾಣಾಯಾಮ ಸಹ ಅಭ್ಯಂಜನ ಸ್ನಾನ ಸಹಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ಬಾಗೇಪಲ್ಲಿ ಯೋಗ ಬಂಧುಗಳು ಮಾತನಾಡಿ ಬಾಗೇಪಲ್ಲಿಯಲ್ಲಿ ಯೋಗ ಎಷ್ಟು ದೊಡ್ಡ ಮಟ್ಟಿಗೆ ಬೆಳೆಯಲು ಯೋಗ ಶಿಕ್ಷಕರಾದ ಜಗದೀಶ್ ಅಣ್ಣನವರು ಕಾರಣ ಅವರು ಬಾಗೇಪಲ್ಲಿಯಲ್ಲಿ ಒಂದು ಯೋಗದ ಬಗ್ಗೆ ಕ್ರಾಂತಿ ಮತ್ತು ಬಾಗೇಪಲ್ಲಿ ಜನತೆಯಲ್ಲಿ ಯೋಗ ಸಂಚಲನವನ್ನು ಮೂಡಿಸುತ್ತಿದ್ದಾರೆ ಎಂದರು.ಅಲ್ಲದೆ ಬಾಗೇಪಲ್ಲಿ ಜನತೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಬಾಗೇಪಲ್ಲಿ ಶಾಖೆ ವತಿಯಿಂದ ಪ್ರಥಮ ಬಾರಿಗೆ ಸಹಲ್ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಇದು ಉಚಿತವಾಗಿದೆ ಇದನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಲು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸಂಚಾಲಕರಾದ ಮಂಜುಳಾ ಮಾರ್ಕಾಂಡೇಯ ಚಿಕ್ಕಬಳಾಪುರ ಜಿಲ್ಲಾ ಸಂಚಾರ ಸಂಚಾಲಕ ಸುಂದರಾಚಾರಿ ಹಾಗೂ ರಾಮಚಂದ್ರ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here