ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಕಾರ್ಯಕ್ರಮ…

0
433

ಬೆಂಗಳೂರು/ಮಹದೇವಪುರ:ಸಾಮಾನ್ಯವಾಗಿ ನಮಗೇ ಯಾವುದೋ ಒಂದು ದೇಶದ ರಾಜಧಾನಿ ಯಾವುದು ಅಂದ್ರೆ ಬಾಯ್ ಬೀಡ್ತವಿ. ಆದ್ರೆ ಈ ಮಕ್ಕಳು ರಾಷ್ಟ್ರದ ರಾಜಧಾನಿಗಳನ್ನು ಹೇಳುವುದು ಅಷ್ಟೇ ಅಲ್ದೇ ಅವುಗಳ ನಕ್ಷಯನ್ನು ಕೂಡಾ ಗುರುತಿಸುತ್ತಾರೆ. ಬೆಂಗಳೂರಿನ ಚೈತನ್ಯ ಟೆಕ್ನೋ ಸ್ಕೂಲ್ ನ ಚಿಣ್ಣರು ಐದೇ ಐದು ನಿಮಿಷಗಳ ಅವಧಿಯಲ್ಲಿ ನೂರೊಂದು ರಾಷ್ಟ್ರಗಳ ನಕ್ಷೆಗಳನ್ನು ಗುರುತಿಸಿ ಅವುಗಳ ರಾಜಧಾನಿಯ ಹೆಸರುಗಳನ್ನ ಹೇಳುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್​​​​​ನಲ್ಲಿ ಸದ್ದು ಮಾಡಿದ್ದಾರೆ.

ಬೆಂಗಳೂರಿನ ಚೈತನ್ಯ ಟೆಕ್ನೋ ಸ್ಕೂಲ್ ನ ಎಲ್ಲಾ ಶಾಖೆಗಳ ಪೂರ್ವ ಪ್ರಾಥಮಿಕ ಹಂತದ ಎಲ್ಲಾ ಶಾಲೆಗಳಲ್ಲಿ ಈ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಕಾರ್ಯಕ್ರಮವನ್ನ ಏಕ ಕಾಲಕ್ಕೆ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಮೂರರಿಂದ ಐದನೇ ವರ್ಷದ ಮಕ್ಕಳು ಭಾಗವಸಿದ್ದರು, ಮಾರತಹಳ್ಳಿ ಝೋನಲ್ ಶಾಲೆಯಲ್ಲಿ 10ಮಕ್ಕಳು ಭಾಗವಸಿದ್ದರು. ಇದರಲ್ಲಿ 9ಮಕ್ಕಳು ನೂರಕ್ಕೆ ನೂರರಷ್ಟು ಅಂಕ ಪಡೆದ್ರೆ ಒಂದು ಮಗು ಮಾತ್ರ 96 ಅಂಕ ಪಡೆಯುವ ಮೂಲಕ ವರ್ಲ್ಡ್‌ ಬುಕ್ ಆಫ್ ರಿಕಾರ್ಡ್ ಸಾಧನೆ ಮಾಡಿದ್ರು.
ಸ್ಟಾರ್ ಮಾವರಿಕ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಸ್ಪಧೆರ್ಯಲ್ಲಿ ಚೈತನ್ಯ ಟೆಕ್ನೋ ಸ್ಕೂಲ್​​​​​ನ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ಮಕ್ಕಳಲ್ಲಿ ಸ್ಮರಣಾಶಕ್ತಿಯನ್ನ ಹೆಚ್ಚಿಸಲು ಉಪಯುಕ್ತವಾಗಿದ್ದು, ಮಕ್ಕಳನ್ನ ಮುಂದಿನ ಪೀಳಿಗೆಗೆ ಸಿದ್ದವಾಗುವ ಶೈಕ್ಷಣಿಕ ಸಾಮಥ್ಯ ತುಂಬುವ ಪ್ರಯತ್ನವನ್ನ ಶಾಲೆ ಮಾಡುತ್ತಿದೆ. ಒಟ್ನಲ್ಲಿ ದೊಡ್ಡವರೇ ಹೇಳುವುದಕ್ಕೆ ತಡರಿಸುವ ಮಾಹಿತಿಗಳನ್ನು ಪುಟ್ಟ ಪುಟ್ಟ ಮಕ್ಕಳು ಹೇಳಿ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here