ಅನಾಥಾಲಯದಲ್ಲಿ ಹುಟ್ಟು ಹಬ್ಬ ಆಚರಣೆ…

0
481

ಚಿಕ್ಕಬಳ್ಳಾಪುರ/ಚಿಂತಾಮಣಿ:ಡಾ.ಎಂ.ಸಿ.ಸುಧಾಕರ್ ರೆಡ್ಡಿಯವರ 49 ನೇ ವರ್ಷದ ಹುಟ್ಟು ಹಬ್ಬವನ್ನು ನಗರದ 4 ನೇ ವಾರ್ಡ್‌ ನಲ್ಲಿರುವ ಶಿಲ್ಪ ವಿದ್ಯಾ ಸಂಸ್ಥೆ ಯ ನರಸಿಂಹಪ್ಪ ಅವರ ಅಧೀನದಲ್ಲಿರುವ ವೃದ್ಧ ಹಾಗೂ ಅನಾಥಾಲಯದಲ್ಲಿ ಸಡಗರದಿಂದ ಆಚರಿಸಲಾಯಿತು.ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ವೃದ್ಧರಿಗೆ ಶಾಲು ಹೊದಿಸಿ ಕೇಕ್ ಕತ್ತರಿಸಲಾಯಿತು.ನಂತರ ಮಕ್ಕಳಿಗೆ ಸಿಹಿ ಹಂಚುವಿದರೊಂದಿಗೆ ಅಲ್ಲಿ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಭಾಸ್ಕರ್, ನಿಸಾರ್ ಷಾ, ಫ್ರೆಂಡ್ಸ್ ಇಲಿಯಾಜ್, ಮುಖಂಡರಾದ ಎಂ.ಎನ್.ಶಿವಾರೆಡ್ಡಿ,ಅಶೋಕ್,ಶಿಲ್ಪ ನರಸಿಂಹಪ್ಪ, ನಾಸಿರ್, ಎ.ಟಿ.ಎಸ್.ಅಸ್ಲಂ, ವಿಜಯ್,ಸುನೀಲ್, ಶಂಕರ್, ಉಮೇರ್,ಉಮೇಶ್, ಬಬ್ಲು(ಚೇತನ್) ಮತ್ತು ಹಲವು ಎಂ.ಸಿ.ಸುಧಾಕರ್ ಬಣದ ಕಾರ್ಯಕರ್ತರು ಸ್ಥಳದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here