ಶಾಸಕನ ಮನೆ ಮುಂದೆ ವಿಷ ಕುಡಿದು ಆತ್ಮಹತ್ಯೆ..

0
255

ಬಾಗಲಕೋಟ:ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮನೆ ಎದುರು ಮಹಿಳೆಯೋರ್ವಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಯರಗೊಪ್ಪ ಎಸ್​ಸಿ ಗ್ರಾಮದ ಶಾಂತವ್ವ ವಾಲಿಕಾರ್​ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಯರಗೊಪ್ಪ ಗ್ರಾಮದ ಗ್ರಾಮದಲ್ಲಿ ಶಾಂತವ್ವ ಪತಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರ ನಿಧನದ ಬಳಿಕ ಆ ಹುದ್ದೆಯನ್ನು ತಮ್ಮ ಮಗ ಶಂಕರಪ್ಪನವಿಗೆ ನೀಡುವಂತೆ ಶಾಸಕರ ಬಳಿ ಶಾಂತವ್ವ ಮನವಿ ಮಾಡಿದ್ದರು. ಆದರೆ, ಶಾಸಕರು ತಮ್ಮ ಆಪ್ತ ಗೋವಿಂದಪ್ಪನವರನ್ನು ನೇಮಕ ಮಾಡಿದ್ದರು ಎನ್ನಲಾಗಿದೆ.ಈ ವಿಷಯ ತಿಳಿದ ಮಹಿಳೆ ಅವರ ಮನೆ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ತಿಳಿದ ಗ್ರಾಮಸ್ಥರು ಚಿಮ್ಮನಕಟ್ಟಿ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಇನ್ನು ಈ ಹೊತ್ತಾದರೂ ಮಹಿಳೆಯ ಮರಣೋತ್ತರ ಪರೀಕ್ಷೆ ಇನ್ನೂ ನಡೆದಿಲ್ಲ.ಊರಿನ ಗ್ರಾಮಸ್ಥರು ಯಾವುದೇ ಒಂದು ನಿರ್ಣಯಕ್ಕೆ ಬರುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ .

ಬಾದಾಮಿ ತಾಲ್ಲೂಕು ಬೂದಿ ಮುಚ್ಚಿದ ಕೆಂಡದಂತೆ ಇದೆ.ಯಾವಾಗ ಬೇಕಾದರೂ ಜನ ಪುಟಿದೇಳುವ ಸಾಧ್ಯತೆ ಇದೆ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬದಾಮಿಯ ಸುತ್ತಮುತ್ತ ಮತ್ತು ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತನ್ನು ವ್ಯವಸ್ಥೆ ಮಾಡಿದ್ದಾರೆ.ಬಾದಾಮಿ ಮತ್ತು ರೋಣ ಹೋಗುವ ಮಾರ್ಗ ಸಂಪೂರ್ಣ ಸ್ತಬ್ಧವಾಗಿದೆ.ಸುಮಾರು ಎರಡು ನೂರು ಐವತ್ತು ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ನಿಯೋಜನೆ ಮಾಡಿದ್ದಾರೆ.ಶಾಸಕರು ಮಾತ್ರ ನಾಪತ್ತೆಯಾಗಿದ್ದಾರೆ .

ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ

LEAVE A REPLY

Please enter your comment!
Please enter your name here