ಸಾರ್ವಜನಿಕರಿಗೆ ಕರ ಪತ್ರ ಹಂಚುವುದರ ಮ‌ೂಲಕ ಅರಿವು..

0
130

ಬೆಂಗಳೂರು/ಕೆ.ಆರ್.ಪುರ:ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪ ಇರುವುದರಿಂದ ಪ್ರತಿ ಒಬ್ಬ ಮತದಾರನು ತಮ್ಮ ಮತವನ್ನು ಮಾರಾಟ ಮಾಡದೆ ಸೂಕ್ತ ಅಭ್ಯರ್ಥಿಗೆ ಮತ ನೀಡಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ತಾಲ್ಲೂಕು ಪಂಚಾಯತಿ, ತಾಲ್ಲೂಕು ಆರೋಗ್ಯ ಇಲಾಖೆಗಳ ನೇತೃತ್ವದಲ್ಲಿ ಆಶಾ ಕಾರ್ಯಕರ್ತರ ಸಹಯೋಗದೊಂದಿಗೆ ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ ಮುಂಬಾಗದಲ್ಲಿ ಸಾರ್ವಜನಿಕರಿಗೆ ಕರ ಪತ್ರ ಹಂಚುವುದರ ಮ‌ೂಲಕ ಅರಿವು ಮೂಡಿಸಿದರು.ಇದೇ ವೇಳೆ ಮಾತನಾಡಿದ ತಾಲ್ಲೂಕು ವೈಧ್ಯಾಧಿಕಾರಿ ಚಂದ್ರ ಶೇಖರ್ ಮತ ನೀಡುವುದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯ, ತಮ್ಮ ಮತವನ್ನು ಸೂಕ್ತ ಅಭ್ಯರ್ಥಿಗೆ ನೀಡಬೇಕೆಂದು ಸೂಚಿಸಿದರು.ಬೆಂ.ಪೂ.ತಾ ಕಾರ್ಯನಿರ್ವಾಹಕ ಅಧಿಕಾರಿ ಮುನಿಕೃಷ್ಣಪ್ಪ ಮಾತನಾಡುತ್ತಾ ಮತದಾರರ ಪಟ್ಟಿಯಲ್ಲಿ ತಪ್ಪುಗಳನ್ನು ಬಿಎಲ್ಓ ಗಳನ್ನು ಬೇಟಿಮಾಡಿ ಸರಿಪಡಿಸ ಬೇಕೆಂದು ಸೂಚಿಸಿದರು.ಈ ಸಂದರ್ಭದಲ್ಲಿ ಹೆಲ್ತ್ ಇನ್ ಪೆಕ್ಟರ್ ಬಾಬು ಸೇರಿದಂತೆ ಹಲವಾರು ಭಾಗವಹಿಸಿದರು.

LEAVE A REPLY

Please enter your comment!
Please enter your name here