ಸಂವಾದ ಕಾರ್ಯಕ್ರಮ..

0
105

ಬಾಗಲಕೋಟೆ/ಗುಳೇದಗುಡ್ಡ:ಚಿತ್ರರಂಗದಲ್ಲಿ ನಟಿಸಲೆಂದು ಬರುವ ಯುವತಿಯರು ಪಾತ್ರ ಮಾಡುವ ಮೊದ್ಲು ಈಗಲೂ ಮೋಸ ಹೋಗುತ್ತಿದ್ದಾರೆ, ಅಂತಹ ಪ್ರವೃತ್ತಿ ನಿಲ್ಲಬೇಕು ಎಂದು ಹಾಸ್ಯನಟ ಮಂಡ್ಯ ರಮೇಶ ಹೇಳಿದ್ರು.ಅವರು ಬಾಗಲಕೋಟೆಯಲ್ಲಿ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮ ವೇಳೆ ಮಾತನಾಡಿ, ಸಿನಿಮಾ ಎಂಟ್ರಿಗೂ ಮೊದ್ಲು ಯುವತಿಯರು ಮೋಸ ಹೋಗುವಂತಹ ಪ್ರವೃತ್ತಿ ಈಗಲೂ ಇದೆ, ಅದು ಕನ್ನಡ, ತೆಲುಗು, ತಮಿಳು ಎಲ್ಲೆಡೆ ಇದ್ದು ಇದು ಹೋಗಬೇಕಾಗಿದೆ. ಇದು ಇಲ್ಲಾ ಎಂದು ಹೇಳುವ ಗಟ್ಟಿ ಧೈರ್ಯ ನನ್ನಲ್ಲಿ ಇಲ್ಲ ಎಂದ ಹೇಳಿದ ಅವ್ರು, ಇದಕ್ಕೆ ಯುವಕ ಯುವತಿಯರು ಎಚ್ಚೆತ್ತು ಮುನ್ನಡೆಯಬೇಕಿದೆ ಎಂದರು. ಇನ್ನು ಈ ಕುರಿತಂತೆ ಕೆಲವ್ರು ನನ್ನ ಮೇಲೂ ಸುಳ್ಳು ಆರೋಪ ಮಾಡಲು ಮುಂದಾದ್ರು ಆದ್ರೆ ನಾನು ತಪ್ಪೇ ಮಾಡಿರಲಿಲ್ಲ, ಹೀಗಾಗಿ ಸಾಕ್ಷ್ಯಗಳಿಲ್ಲದೆ ಅವರಿಗೆ ಹಿನ್ನಡೆಯುಂಟಾಯಿತು. ನನ್ನನ್ನ ಡ್ಯಾಮೇಜ್​ ಮಾಡೋಕೆಂದೆ ಕೆಲವರು ಮಾಡಿದ ನಾಟಕ ಅದಾಗಿತ್ತು. ಆದ್ರೆ ನನ್ನಲ್ಲಿ ಯಾವುದೂ ತಪ್ಪಿರಲಿಲ್ಲ. ಕಾಣದ ಕೈಗಳು ನನ್ನ ಜೀವನದಲ್ಲಿ ಆಟವಾಡಿದವು. ಆದರೆ ನಾನು ನಿರಪರಾಧಿ ಆದೆ ಎಂದರು. ಇನ್ನು ಈಗಲೂ ಸಿನಿಮಾ ರಂಗದಲ್ಲಿರೋ ಯುವತಿಯರನ್ನ ಬಳಸಿಕೊಳ್ಳುವ ಪ್ರವೃತ್ತಿ ಇಲ್ಲ ಎಂದು ಹೇಳುವ ಶಕ್ತಿ ನನ್ನಲ್ಲಿ ಇಲ್ಲ, ಇಂತಹ ಪ್ರವೃತ್ತಿ ತೊಲಗಬೇಕಿದೆ ಎಂದು ಹೇಳಿದ್ರು.

ಬೈಟ್:- ಮಂಡ್ಯರಮೇಶ್​ (ಹಾಸ್ಯನಟ)

ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ

LEAVE A REPLY

Please enter your comment!
Please enter your name here