ಮತದಾನ ಜಾಗೃತಿ ಕಾರ್ಯಕ್ರಮದ ವೇಳೆ ಹೆಜ್ಜೇನು ಕಡಿತ…

0
118

ಬಾಗಲಕೋಟೆ:ಮತದಾನ ಜಾಗೃತಿ ಕಾಯ೯ಕ್ರಮದ ವೇಳೆ ಹೆಜ್ಜೇನು ಕಡಿದ ಪರಿಣಾಮ ೧೫ಕ್ಕೂ ಅಧಿಕ ಮಕ್ಕಳು ಸೇರಿದಂತೆ ಶಿಕ್ಷಕರು ಮತ್ತು ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ದಾಖಲಾಗಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಮತದಾನ ಜಾಗೃತಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಇನ್ನೇನು ಕಾಯ೯ಕ್ರಮ ಪ್ರಾರಂಭವಾಗಬೇಕಿದ್ದ ವೇಳೆ ಹೆಜ್ಜೇನು ಎದ್ದು ಅಲ್ಲಿ ಕಾಯ೯ಕ್ರಮಕ್ಕೆ ಬಂದಿದ್ದ ಶಾಲಾ‌ ಮಕ್ಕಳು , ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಕಚ್ಚಲಾರಂಬಿಸಿವೆ ಇದ್ರಿಂದ ಗಾಬರಿಗೊಂಡು ಕ್ಷಣಕಾಲ ಅಲ್ಲಿದ್ದವರೆಲ್ಲಾ ತಬ್ಬಿಬ್ಬುಗೊಂಡು ಓಡಾಡುವಂತಾಯಿತು. ಘಟನೆ ಹಿನ್ನೆಲೆಯಲ್ಲಿ ತಕ್ಷಣವೇ ಅಂಬ್ಯಲೆನ್ಸ್ ಮೂಲಕ ೧೫ ಕ್ಕೂ ಅಧಿಕ ಮಕ್ಕಳನ್ನು ನವನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಈ ಮದ್ಯೆ ಇಬ್ಬರು ಶಿಕ್ಷಕರು ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಸಹ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದು ಕಂಡು ಬಂತು. ಇನ್ನು ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಎಚ್ ಓ ದೇಸಾಯಿ ಆಗಮಿಸಿ ಮಕ್ಕಳ ಸ್ಥಿತಿಗತಿ ಪರಿಶೀಲಿಸಿದ್ರು. ಈ ವೇಳೆ ಮಾತನಾಡಿದ ವೈದ್ಯರು, ಸದ್ಯ ಮಕ್ಕಳಿಗೆ ತೀವ್ರತರವಾದ ಯಾವುದೇ ತೊಂದರೆ ಇಲ್ಲ, ಪ್ರಥಮ ಚಿಕಿತ್ಸೆ ನೀಡುತ್ತಿದ್ದು, ಬಳಿಕ ಡಿಸ್ಚಾಜ೯ ಮಾಡೋದಾಗಿ ಹೇಳಿದ್ರು.

ಬೈಟ್:- ಡಾ.ಅನಂತರೆಡ್ಡಿ.

ಜಿಲ್ಲಾ ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟೀವಿ ಬಾಗಲಕೋಟ

LEAVE A REPLY

Please enter your comment!
Please enter your name here