ಕೊನೆಯ ಗಳಿಗೆಯಲ್ಲಿ ಕೈ ತಪ್ಪಿದ ಟಿಕೆಟ್..

0
97

ಬಾಗಲಕೋಟೆ:ಬದಾಮಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮತ್ತು ಈಗಿನ M LA ಬಿಬಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ.

ಕೊನೆಯ ಗಳಿಗೆಯಲ್ಲಿ ಕೈ ತಪ್ಪಿದ ಟಿಕೆಟ್ .

ಬದಾಮಿ ವಿಧಾನಸಭಾ ಕ್ಷೇತ್ರದ ಈಗಿನ ಎಂಎಲ್ಎ ಬಿ ಬಿ ಚಿಮ್ಮನಕಟ್ಟಿ ಅವರಿಗೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿದೆ ಇದರಿಂದ ಆಕ್ರೋಶಗೊಂಡ ಮುಖಂಡರು ರಸ್ತೆ ತಡೆದು ಟಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಧಿಕ್ಕಾರ ಧಿಕ್ಕಾರ ದೇವರಾಜ್ ಪಾಟಲಿಗೆ ಧಿಕ್ಕಾರ ಎಂದು ಮುಖಂಡರು ಹೇಳು ತ್ತಿದ್ದಾರೆ.ಬಾದಾಮಿಯಲ್ಲಿ ಬಿಗುವಿನ ವಾತಾವರಣ ಎದ್ದು ಕಾಣುತ್ತಿದೆ.ಬಿ ಬಿ ಚಿಮ್ಮನಕಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುತ್ತಾರೆ ಕಾದು ನೋಡಬೇಕು ?
ಅನಾರೋಗ್ಯದಿಂದ ವಯಸ್ಸಿನ ಕಾರಣದಿಂದ ಟಿಕೆಟ್ ಕೈ ತಪ್ಪಿದೆ ಎಂದು ನಾಯಕರು ಹೇಳುತ್ತಿದ್ದಾರೆ.ಈಗಿನ ಎಮ್ಮೆಗಳು ಮತ್ತು ಹಾಲಿ ಎಲ್ಲೆಗಳು ಸುಮಾರು ಹತ್ತು ಜನಕ್ಕೂ ಟಿಕೆಟ್ ಕೊಟ್ಟಿಲ್ಲ ಅದರಲ್ಲಿಯೂ ಕೂಡ ಬಿ ಬಿ ಚಿಮ್ಮನಕಟ್ಟಿ ಕೂಡ ಒಬ್ಬರು.ಮುಂದೆ ಯಾವ ರೀತಿ ನಿರ್ಧಾರ ತೂಗುತ್ತಾರೆ ಚಿಮ್ಮನಕಟ್ಟಿಯವರು ಕಾದು ನೋಡಬೇಕಾಗಿದೆ?
ಕೊನೆಯ ಗಳಿಗೆಯಲ್ಲಿ ಸಿದ್ದರಾಮಯ್ಯನವರೇ ಬದಾಮಿ ಕ್ಷೇತ್ರದಲ್ಲಿ ಬರುತ್ತಾರೆ ಎಂಬುದು ಕಾವು ಜೋರಾಗಿತ್ತು.
ಆದರೆ ಕೊನೆಯ ಗಳಿಗೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಬೇಕು ಎಂದು ಹೈಕಮಾಂಡ್ ಖಡಕ್ಕಾಗಿ ಸೂಚನೆ ಮಾಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು.ಚಾಮುಂಡಿ ಕ್ಷೇತ್ರದಲ್ಲಿ ನಿಲ್ಲಬೇಕಾದ ಅನಿವಾರ್ಯ ಬಂತು ಇದರಿಂದ ಅನಿವಾರ್ಯವಾಗಿ ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.ಅಲ್ಲಿನ ಮುಖಂಡರು ಹೇಳುತ್ತಿರುವ ಹಾಗೆ ಬಿಬಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಕೊಡದಿದ್ದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ಒಂಥರ ಮುಳುವಾಗಿ ಕಾಡಬಹುದು ಎಂದು ಹೇಳುತ್ತಿದ್ದಾರೆ.ಇನ್ನು ಯಾವ ರೀತಿ ನಿರ್ಧಾರ ಅಂತಾರೆ ಹೈಕಮಾಂಡಿನ ನಾಯಕರು ಕಾದು ನೋಡಬೇಕು.

ವರದಿಗಾರ ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ .

LEAVE A REPLY

Please enter your comment!
Please enter your name here