ಮಂಡ್ಯ/ಮಳವಳ್ಳಿ: ಕಳೆದ ರಾತ್ರಿ ಬಿದ್ದ ಬಾರೀ ಮಳೆ ಹಾಗೂ ಬಿರುಗಾಳಿ ರೈತರೊಬ್ಬರ ಬಾಳೆ, ತೆಂಗಿನಮರ , ಮಾವಿನಮರ ಮುರಿದ ಪರಿಣಾಮ ಲಕ್ಷಾಂತರ ರೂ ನಷ್ಟ ವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮರಿಸ್ವಾಮಿ ಎಂಬುವವರ ತೋಟವೇ ಬಿರುಗಾಳಿಗೆ ತತ್ತರಿಸಿದ್ದು, ಪ್ರಕೃತಿ ವಿಕೋಪ ದಡಿಯಲ್ಲಿ ರೈತ ಮರಿಸ್ವಾಮಿರವರು ತಹಸೀಲ್ದಾರ್ ಗೆ ದೂರು ಸಲ್ಲಿಸಿದ್ದಾರೆ. ನಾನು ಸಾಲವನ್ನು ಮಾಡಿ ಬಾಳೆಗಿಡ, ತೆಂಗಿನಮರ . ಹಲಸಿನಮರ.ಮಾವಿನಗಿಡ ಹಾಕಿದ್ದು, ಕಳೆದ ರಾತ್ರಿ ಬಂದ ಬಿರುಗಾಳಿಗೆ ಈ ಅನುಹುತವಾಗಿದೆ. ನನಗೆ ಸರ್ಕಾರ ಪರಿಹಾರ ನೀಡಬೇಕು ಇಲ್ಲದಿದ್ದರೆ ನನಗೆ ಸಾವೇ ಮುಂದಿನ ದಾರಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.