ಜನಸಾಗರದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಭೈರತಿ….

0
98

ಬೆಂಗಳೂರು/ ಕೆ.ಆರ್.ಪುರ : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಬಸವರಾಜ್ ಜನಸಾಗರದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಆರ್.ಪುರ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹಿರಬಂದ ಅವರು ನೆರೆದಿದ್ದ ಜನಸಾಗರದತ್ತ ಕೈ ಬೀಸಿ ಉರಿದುಂಬಿಸಿದರು. ಭೈರತಿ ಬಸವರಾಜ್ ಸಲ್ಲಿಸಿರುವ ನಾಮಪತ್ರದಲ್ಲಿ 90 ಕೋಟಿ 91 ಲಕ್ಷ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ನೀಡಿರುವ ವಿವರದಲ್ಲಿ ಚರಾಸ್ತಿ 33.91 ಕೋಟಿ, ಸ್ಥಿರಾಸ್ತಿ 56.99 ಕೋಟಿಯಿದ್ದು, 13.68 ಕೋಟಿ ಹೊಣೆಗಾರಿಕೆ/ಸಾಲ ತೋರಿಸಿದ್ದಾರೆ. ಇನ್ನು 2013 ರಲ್ಲಿ 48 ಕೋಟಿ ಆಸ್ತಿ ಹಾಗು 4.28 ಕೋಟಿ ಸಾಲ ತೋರಿಸಿದ್ದ ಭೈರತಿ ಬಸವರಾಜ್ ಈ ಭಾರಿ 42 ಕೋಟಿ ರೂಪಾಯಿ ಹೆಚ್ಚುವರಿ ಆಸ್ತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇನ್ನು ಇವರು ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರೆದಾಡುವಂತಾಯಿತು. ಇನ್ನು ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸು ಹರ ಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ನನ್ನ ವಿರುದ್ದ ಬಿಜೆಪಿ ಯವರು ಇಲ್ಲಸಲ್ಲದ ಅರೋಪ ಮಾಡುತ್ತಿದ್ದಾರೆ. ಇದಕ್ಕೆ ಇಂದು ಇಲ್ಲಿ ಸೇರಿರುವ ಜನಸಾಗರ ಉತ್ತರ ನೀಡಿದ್ದು ಮೇ 15 ನನ್ನ ಗೆಲುವಿನ ಅಂತರವನ್ನ ಕ್ಷೇತ್ರದ ಜನ ತೋರಿಸುತ್ತಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here