ವೈದ್ಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

0
47

ರಾಯಚೂರು/ಮಾನ್ವಿ: ತಾಲೂಕಿನ ಸರಕಾರಿ ಆಸ್ಪತ್ರೆ ಯಲ್ಲಿ ರಾತ್ರಿ ಕರ್ತವ್ಯ ನಿರತ ವೈದ್ಯ ಡಾ.ಬಾಷಿತ ಲತೀಫ್ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ವೈದ್ಯರ ಮೇಲೆ ಹಲ್ಲೆಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಆಸ್ಪತ್ರೆ ವೈದ್ಯರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಡಾ.ಭಾಷಿತ ಲತೀಫ್ ಮಕ್ಕಳ ತಜ್ಞ ವೈದ್ಯರು ರಜೆ ಮೇಲೆ ಇದ್ದಾರೆ ನನಗೆ ರಾತ್ರಿ ಪಾಳಿ ಇದ್ದಿದ್ದರಿಂದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆಯನ್ನು ಪಾಲಕರಿಗೆ ನೀಡಿದ್ದೇ ಆದರೆ ಮಗುವಿಗೆ ಚಿಕಿತ್ಸೆ ನೀಡುವ ಸಂದರ್ಭ ದಲ್ಲಿ ಏಕಾಏಕಿಯಾಗಿ ನನ್ನ ಮೇಲೆ ಪಾದರಕ್ಷೆ ಗಳಿಂದ ಹಲ್ಲೆ ಮಾಡಿದ್ದಾರೆ.ಇದರಿಂದ ನನಗೆ ತುಂಬಾ ನೋವುಂಟಾಗಿದೆ ಎಂದು ಅವರ ನೋವನ್ನು ಹೇಳಿಕೊಂಡರು.

ಬೈಟ್ :- ಡಿಎಚ್ಒ ಲಕ್ಷ್ಮಿದೇವಿ.

ವಾ/ಓ:- ವೈದ್ಯರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ವೈದ್ಯರಿಂದ ತಪ್ಪುಗಳು ನಡೆದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಅದನ್ನು ಬಿಟ್ಟು ಸಾರ್ವಜನಿಕರು ಈ ರೀತಿ ವರ್ತನೆ ಮಾಡುವುದು ಸರಿಯಲ್ಲ ಮೊದಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ಮಾಡಲು ವೈದ್ಯರು ಬರುವುದೇ ಅಪರೂಪ. ಹೀಗೆ ಮಾಡಿದರೆ ಹೇಗೆ ಈ ಘಟನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ ವೆಂಕಟೇಶ್ ನಾಯಕ್. ಡಾ. ಶರಣಪ್ಪ. ಶರಣಬಸವ. ಡಾ ಭಾಷಿತ ಲತೀಫ. ಸಿಬ್ಬಂದಿಗಳಾದ: ಬಸವರಾಜ್ ರಾಮು. ಗಂಗಾಧರ್. ಪುಷ್ಪಾವತಿ. ಜ್ಯೋತಿ. ಸೋನಿಯಾ. ಬಸಲಿಂಗ. ಸೇರಿ ಅನೇಕ ಸಿಬ್ಬಂದಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here