ಸಿಡಿಲಿಗೆ ರೈತ ಮಹಿಳೆ ಬಲಿ…

0
89

ಮಂಡ್ಯ/ಮಳವಳ್ಳಿ:ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲ್ಲೂಕಿನ ಬಸವನ ಹಳ್ಳಿ ಗ್ರಾಮದಲ್ಲಿ ನಡೆದಿದೆ.. ಗ್ರಾಮದ ಬಸವರಾಜಪ್ಪ ಪತ್ನಿ ಗಿರಿಜಮ್ಮ(35). ಮೃತಪಟ್ಟ ಮಹಿಳೆ ಮನೆಯ ಹಿಂಭಾಗವಿರುವ ರೇಷ್ಮೆ ತೋಟದಲ್ಲಿರುವ ಕಳೆ ಕೀಳುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ತಹಸೀದ್ದಾರ್ ಉದಯಕುಮಾರ್ ಹಾಗೂ ಹಲಗೂರು ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಬೇಟಿ ಮಾಹಿತಿ ಸಂಗ್ರಹಿಸಿದರು. ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here