ಹಾಸುಗಲ್ಲು ಉರುಳಿ ಕಾರ್ಮಿಕ ಸಾವು

0
67

ಚಿಕ್ಕಬಳ್ಳಾಪುರ/ಚಿಂತಾಮಣಿ:- ಟೆಂಪೋದಲ್ಲಿದ ಮಾರ್ಬಲ್ ಹಾಸುಗಲ್ಲು ಇಳಿಸುವಾಗ ಅವಘಡ. ಕೂಲಿ ಕಾರ್ಮಿಕ ಸಾವು.

ಆಕಸ್ಮಿಕವಾಗಿ ಹಾಸುಗಲ್ಲು ಗಳು ಉರುಳಿ ಅದರಡಿ ಸಿಲುಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮೂರುಜನ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಕಟಮಾಚನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ‌ ಸಮೀಪ ಘಟನೆ ನಡೆದಿದೆ.

ಘಟನೆಯ ಬಗ್ಗೆ ಮೃತರ ಪತ್ನಿ ಸಂಜೆ ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಚೌಡರೆಡ್ಡಿ ಪಾಳ್ಳದ ನಿವಾಸಿ ರಹಮತ್ತುಲ್ಲಾ(40) ಎನ್ನಲಾಗಿದೆ. ಉಳಿದ ಗಾಯಾಳುಗಳು ಅಲ್ಲಿ ಮಾರ್ಬಲ್ ಹಾಸುಗಲ್ಲು ಸಾಗಿಸುವ ಕಾರ್ಯದಲ್ಲಿ ನಿರತವಾಗಿದ್ದ ಉತ್ತರಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ.

ಮೃತನ ಪತ್ನಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡ‌ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here