ಸಾಲ ನೀಡದಿದ್ದಕ್ಕೆ ಕೊಲೆ…?

0
55

ವಿಜಯಪುರ/ಸಿಂದಗಿ: ಸಾಲ ನೀಡದಿದ್ದಕ್ಕೆ ಮಹಿಳೆ ಯನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಮದೀನಾ ನಗರದಲ್ಲಿ ನಡೆದಿದೆ. ಮದೀನಾ ನಗರದ ನಿವಾಸಿ ರೋಷನಬಿ ಖಡಾಖಡಿ 38 ಕೊಲೆಯಾದ ಮಹಿಳೆಯಾಗಿದ್ದು, ಪಕ್ಕದ ಮನೆಯ ನಿವಾಸಿ ಹುಸೇನ್ ಯಾಳವಾರ ಕೊಲೆಗೈದು ಪರಾರಿಯಾಗಿದ್ದಾನೆ. ಇನ್ನು ರೋಷನಬಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಳು. ರೋಷನಬಿ ಹುಸೇನ್ ಗೆ ಸಾಲ ನೀಡದಿದ್ದಕ್ಕೆ ಕೊಲೆಗೈದಿದ್ದಾನೆ. ಅಲ್ಲದೇ, ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ…

ವರದಿ: ನಂದೀಶ ಹಿರೇಮಠ

LEAVE A REPLY

Please enter your comment!
Please enter your name here