ತಹಶೀಲ್ದಾರ್ ಸಹಿಯನ್ನೇ ನಕಲು…!?

0
64

ಚಿಕ್ಕಬಳ್ಳಾಪುರ/ಚಿಂತಾಮಣಿ:- ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ಆಂದ್ರ ಪ್ರದೇಶದಲ್ಲಿ ಚಿತ್ತೂರು ನ್ಯಾಯಾಲಯದಿಂದ ಸಾಲುವೇಷನ್ ಅರ್ಜಿಗಾಗಿ ಚಿಂತಾಮಣಿ ತಹಶೀಲ್ದಾರ್ ಸಹಿ ಬೇಕಿದ್ದು ಆ ಸಹಿಯನ್ನು ಚಿಂತಾಮಣಿ ನಗರಸಭೆಯ ಮಾಜಿ ಅದ್ಯಕ್ಷ ಹಾಲಿ ಸದಸ್ಯ ಜಿಯಾಉಲ್ಲಾ ರೆಹಮಾನ್ ತಾಲೂಕು ತಹಶೀಲ್ದಾರ್ ನಕಲಿ ಸಹಿಯನ್ನು ಮಾಡಿದ್ದಾರೆಂದು ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಟ್ರಾನ್ಸ್ ಫಾರ್ಮರ್ ಗಳು ಕಳವುವಾಗಿದ್ದು, ಚಿಂತಾಮಣಿ ಮೂಲದ ಖಾದರ್ ಪಾಷಾ ಫಯಾಜ್ ಅಹಮದ್ ಎಂಬುವವರು ಅದನ್ನು ಖರೀಸಿದ್ದು ಇವರ ವಿರುದ್ದ ಸಹಾ ಚಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪರಕರಣದ ಆಂಧ್ರಪ್ರದೇಶದ ಪೊಲೀಸರು ಇಬ್ಬರು ವ್ಯಾಪಾರಿಗಳನ್ನು ಬಂದಿಸಿದ್ರು. ಈ ಇಬ್ಬರು ವ್ಯಾಪಾರಿಗಳು ಬೇಲ್ ನೀಡುವ ಉದ್ದೇಶದಿಂದ ಜಿಯಾವುರ್ ರೆಹಮಾನ್ & ಶೇಕ್ ಕಾದರ್ ಎಂಬುವವರು ತಾಲೂಕು ದಂಡಾಧಿಕಾರಿಗಳ ಸಹಿ ನಕಲು ಮಾಡಿದ್ದಾರೆಂದು ಅನುಮಾನ ಬಂದಿದೆ. ಇನ್ನು ಸಂಭಂದ ತಹಶೀಲ್ದಾರ್ ವಿಶ್ವನಾಥ ಚಿಂತಾಮಣಿ ನರದ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಆಂದ್ರಪ್ರದೇಶದ ಚಿತ್ತೂರಿನ ನ್ಯಾಯಾಲಯ ಯಾವ ರೀತಿಯಾದ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here