ನೇರ ಸಾಲಕ್ಕೆ ಒತ್ತಾಯಿಸಿ ಪ್ರತಿಭಟನೆ

0
117

ಮಂಡ್ಯ/ಮಳವಳ್ಳಿ: ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಎನ್. ಜಿ. ಓ ಗಳ ಮದ್ಯಸ್ಥಿಕೆ ಇಲ್ಲದೆ ನೇರ ಸಾಲ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಜನಾವಾದಿ ಮಹಿಳಾ ಸಂಘಟನೆ ಹಾಗೂ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ವತಿಯಿಂದ ಮಳವಳ್ಳಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಪುರಸಭೆಯಿಂದ. ಹೊರಟ ಪ್ರತಿಭಟನಾಕಾರರು ಪ್ರಮುಖ ಬೀದಿಗಳ ಮೂಲಕ ಬ್ಯಾಂಕ್ ಮುಂದೆ ಘೋಷಣೆ ಕೂಗಿದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷ ದೇವಿ ಮಾತನಾಡಿ , ಎಲ್ಲಾ ಸ್ತ್ರಿ ಶಕ್ತಿ ಸ್ವ ಸಹಾಯ ಸಂಘಗಳಿಗೆ ತಕ್ಷಣದಲ್ಲಿ ಸಾಲ ಸೌಲಭ್ಯ ನೀಡಬೇಕು, ಬ್ಯಾಂಕುಗಳು ಸಾಲನೀಡದ ಮೇಲೆ ಎಫ್ ಡಿ ಇಡುವುದನ್ನು ಕೈ ಬಿಡಬೇಕು. ಸರ್ಕಾರ ನೀಡುತ್ತಿರುವ 3 ಲಕ್ಷದ ವರೆಗಿನ ಶೇ7 ರಷ್ಟು ಬಡ್ಡಿಯನ್ನು ಸಂಘಗಳಿಗೆ ವಾಪಸ್ ನೀಡಬೇಕು, ಕೃಷಿ ಉದ್ದೇಶಕ್ಕಾಗಿ ಅಡವಿಟ್ಟಿರುವ ಚಿನ್ನಾಭರಣಗಳನ್ನು ಹರಾಜು ಮಾಡಲು ನೋಟೀಸ್ ನೀಡಲು ಮುಂದಾಗಿರುವ ಕ್ರಮವನ್ನು ಕೈ ಬೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುನೀತ, ತಾಲ್ಲೂಕು ಅದ್ಯಕ್ಷೆ ಸುಶೀಲ ,ಮಂಜುಳ, ಡಿವೈ ಎಫ್ಐ ಭರತ್ ರಾಜ್,ನಂಜಮ್ಮಣಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here