ವನಮಹೋತ್ಸವ ಮತ್ತು ಬೀಜದ ಉಂಡೆಗಳ ಬಿತ್ತನೆ ಕಾರ್ಯಕ್ರಮ.

0
97

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಪ್ರಾದೇಶಿಕ ವಲಯದ ಕಾಡುಮಲ್ಲೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಮತ್ತು ಬೀಜದ ಉಂಡೆಗಳ ಬಿತ್ತನೆ ಕಾರ್ಯಕ್ರಮಕ್ಕೆ ಶಾಸಕರದ ಜೆ.ಕೆ ಕೃಷ್ಣಾ ರೆಡ್ಡಿ ರವರು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟನೆ ಮಾಡಿದರು.

ನಂತರ ಶಾಸಕರು ಮತ್ತು ತಾಲೂಕು ಆಡಳಿತ ಅರಣ್ಯ ಇಲಾಖೆ ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಟ್ಟದಲ್ಲಿ ಗಿಡಗಳನ್ನು ನೆಡಿದರು.ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಟ್ಟದಲ್ಲಿ ಎರಡು ಸಾವಿರದ ಐನೂರು ಬೀಜದ ಉಂಡೆಗಳನ್ನು ಭೂಮಿಯನ್ನು ಆಗದು ಬೀಜದ ಉಂಡೆಯನ್ನು ಹಾಕಿದರು.
ನಂತರ ಶಾಸಕ ಜೆಕೆ ಕೃಷ್ಣಾ ರೆಡ್ಡಿ ರವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬ ಚರಣೆಯ ಮಾಡುವ ಸಂದರ್ಭದಲ್ಲಿ ತಮ್ಮ ಮನೆಗಳ ಹತ್ತಿರ ಬೆಳಗ್ಗೆ 4 ಗಿಡಗಳನ್ನು ಬೆಳೆಸಿಸುವ ಪ್ರಯತ್ನ ಮಾಡಿ ನೀವು ಎಷ್ಟು ವರ್ಷ ಬಾಳುತಿರು ಅಷ್ಟು ವರ್ಷಗಳ ಕಾಲ ಬೆಳೆಸಿದರೆ ಒಳ್ಳೆಯ ಗಾಳಿ ವಾತಾವರಣ ಇರುತ್ತದೆ ಎಂದರು.

ನಂತರ ಮಾತನಾಡಿದ ಉಪನ್ಯಾಸಕರ ಡಾ. ರಘುರವರು ನಾವು ಅರಣ್ಯಪ್ರದೇಶವನ್ನು ಸಂರಕ್ಷಣೆ ಮಾಡುವುದೇ ಅಲ್ಲದೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು. ಪ್ಲಾಸ್ಟಿಕ್ ನಿಂದ ಅರಣ್ಯ ನಾಶ ಆಗುವುದರಲ್ಲಿ ಸಂಶಯವಿಲ್ಲ ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ನಾವು ಕಡೆಗಣಿಸಬೇಕು ಅಲ್ಲದೆ ಮನೆಯ ಅಕ್ಕಪಕ್ಕದಲ್ಲಿ ಜಮೀನಿನಲ್ಲಿ ಶಾಲೆಯ ಆವರಣದಲ್ಲಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ತಹಸೀಲ್ದಾರ್ ವಿಶ್ವನಾಥ್ ,ನಗರಸಭೆ ಪೌರಯುಕ್ತರದ ಪ್ರಸದ್ ,ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಬಳ್ಳಾಪುರ ವಿಭಾಗದ ರವಿಶಂಕರ್ ,ಗ್ರಾಮಾಂತರ ಪೊಲೀಸ್ ಸಿಪಿಐ ಬೈರಪ್ಪ ,ಮೀನುಗಾರಿಕ್ಕೆ ಇಲಾಖೆ ನಾಗೇಂದ್ರ ಬಾಬು ,ತಾಲ್ಲೂಕಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರಯ್ಯ,ಚಿನ್ನಪ್ಪ ಯ್ಯ,ಜಯಚಂದ್ರ , ನಗರಸಭೆ ಸದಸ್ಯರಾದ ಮಂಜುನಾಥ್ ,ಶಫೀಕ್ ,ಮತ್ತು ಯುವ ಶಕ್ತಿ ಘಟಕದ ನವೀನ್ , ಅಮರ್,ಬಾಬುರೆಡ್ಡಿ , ಕೃಷ್ಣಪ್ಪ ,ನಾರಾಯಣಸ್ವಾಮಿ ,ಸಾಧೀಕ್,ಶಶೀಧರ್ ,ಹಾಗೂ ಶಾಲೆ ಶಿಕ್ಷಕ ಶಿಕ್ಷಕಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here