ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ‌‌….

0
59

ಮಂಡ್ಯ/ಮಳವಳ್ಳಿ:ರೇಷ್ಮೆ ಗೂಡಿಗೆ ಕನಿಷ್ಠ ರೂ 500 ಬೆಂಬಲ ಬೆಲೆ ಹಾಗೂ ವಿವಿದ ಬೇಡಿಕೆಗಳನ್ನು ಒತ್ತಾಯಿಸಿ ರೇಷ್ಮೆ ಬೆಳಗಾರರ ಒಕ್ಕೂಟ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿದ ಸಂಘಗಳಿಂದ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದಲ್ಲಿ ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಹಲಗೂರಿನ ವಲಗೆರೆದೊಡ್ಡಿ ಗ್ರಾಮದಿಂದ ಹೊರಟ ಪ್ರತಿಭಟನಾಕಾರರು ರಾಜ್ಯಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಮಳವಳ್ಳಿ ಬೆಂಗಳೂರು ಪ್ರಮುಖರಸ್ತೆಯಲ್ಲಿ ಕೆಲನಿಮಿಷ ರಸ್ತೆತಡೆ ನಡೆಸಿದರು. ಇದೇ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮುಕಿ ನಡೆಯಿತು. ನಂತರ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್ ಮಾತನಾಡಿ, ರೇಷ್ಮೆ ಬೆಳೆಗಾರರ ಸ್ಥಿತಿ ಹೇಳತೀರಲಾಗಿದ್ದು . ಈಗಾಗಲೇ ಸರ್ಕಾರವು ಸಹ ಸರಿಯಾಗಿ ಬೆಂಬಲ ನೀಡುತ್ತಿಲ್ಲ ಕೂಡಲೇ ರೇಷ್ಮೆ ಗೂಡಿಗೆ ಕನಿಷ್ಟ ರೂ 500 ಬೆಂಬಲ ಬೆಲೆ ನಿಗದಿ ಮಾಡಬೇಕು. ಇದೇ ಬೆಲೆ ಕುಸಿತದಿಂದ ನಷ್ಟಕ್ಕೀಡಾಗಿರುವ ಎಲ್ಲಾ ರೇಷ್ಮೆ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಹರಾಜು ಆಗುವ ಪ್ರತಿ ರೇಷ್ಮೆ ಗೂಡಿಗೆ ಕೆ.ಜಿಗೆ 500 ರೂ ಗಳಿಗೆ ಹೊಂದಾಣಿಕೆಯಾಗುವಂತೆ ಪ್ರೋತ್ಸಾಹ ಧನ ನೀಡಬೇಕು . ರೇಷ್ಮೆ ಬೆಳೆಗಾರರಿಗೆ ಸಹಾಯಧನ ತರಭೇತಿ ಇತರೆ ಸಹಾಯಕ್ಕಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೊಳಿಸಿ ರೇಷ್ಮೆ ಇಲಾಖೆಯನ್ನು ಬಲಪಡಿಸಬೇಕು. , ಸಿ.ಎಸ್ ಆರ್ ರೇಷ್ಮೆ ಬೆಳೆಯಲು 100 ಮರಿ ಕೊಂಡುಕೊಳ್ಳಲು 1000 ರೂ ಸಹಾಯಧನ ಪ್ಲಾಸ್ಟಿಕ್ ಚಂದ್ರಿಕೆಗೆ ಸಹಾನಧನ ಸಮರ್ಪಕ ವಾಗಿ ವಿತರಿಸಬೇಕು ಎಂದು ಒತ್ತಾಯಿಸಿ ದರು. ಇದಲ್ಲದೆ ರೇಷ್ಮೆ ಬೆಳಗಾರ ದೊಡ್ಡಯ್ಯ ಮಾತನಾಡಿ. ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ಯಾವ ರೀತಿ ಅನುಕೂಲವಾಗುವ ಮಾರ್ಗದ ಬಗ್ಗೆ ಮಾಹಿತಿ ನೀಡುವ ಮೂಲಕ ಜಾರಿ ಮಾಡುವಂತೆ ಸರ್ಕಾರ ವನ್ನು ಒತ್ತಾಯಿಸಿ ದರು ರೇಷ್ಮೆ ಇಲಾಖೆ ಉಪ ನಿರ್ದೇಶಕ ಲೋಕೇಶ್ ಹಾಗೂ ಉಪತಹಸೀಲ್ದಾರ್ ಉದಯಕುಮಾರ್ ರವರಿಗೆ ಮನವಿಸಲ್ಲಿಸಿದ್ದರು ಈ ಪ್ರತಿಭಟನೆಯಲ್ಲಿ ರೈತ ಸಂಘ ಮುಖಂಡ ಶ್ರೀನಿವಾಸ್. ದೇವರಾಜು, ಮಹದೇವ , ಎ.ಎಲ್ ಶಿವಕುಮಾರ, ರಾಜೇಗೌಡ, ನಾಗೇಶ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here