ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

0
59

ಮಂಡ್ಯ/ಮಳವಳ್ಳಿ: ರೇಷ್ಮೆಗೂಡಿಗೆ ಕನಿಷ್ಟ ರೂ 500 ರೂ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆ ಮಳವಳ್ಳಿ ಹೊರವಲಯ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತಸಂಘ ಮೂಲಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ.ರಾಮಲಿಂಗೇಗೌಡರವರ ನೇತೃತ್ವದಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಮುತ್ತಿಗೆಹಾಕಿದರು ನಂತರ ಮದ್ದೂರು ಮಳವಳ್ಳಿ ಪ್ರಮುಖಯನ್ನು ಕೆಲನಿಮಿಷ ರಸ್ತೆತಡೆ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ರಾಮಲಿಂಗೇಗೌಡ ಮಾತನಾಡಿ ರೈತರ ಸಂಕಷ್ಟವನ್ನು ಸರ್ಕಾರಗಳು ಅರ್ಥಮಾಡಿಕೊಂಡು ಈ ಕೂಡಲೇ ರೇಷ್ಮೆಗೂಡಿಗೆ ಕನಿಷ್ಟ 500 ರೂ ನೀಡಬೇಕು . ರೇಷ್ಮೆ ಉತ್ಪನ್ನಗಳ ನ್ನು ಅಭಿವೃದ್ಧಿ ಪಡಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇ ಕು ಎಂದರು. ಇದು ಸಾಂಕೇತಿಕಪ್ರತಿಭಟನೆಯಾಗಿದ್ದು, ಕ್ರಮಕೈಗೊಳ್ಳದಿದ್ದರೆ ಮತ್ತಷ್ಟು ಉಗ್ರಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು .

ಪ್ರತಿಭಟನೆ ಸಂದರ್ಭದಲ್ಲಿ ರೇಷ್ಮೆ ಗೂಡನ್ನು ರಸ್ತೆಗೆ ಚಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಯಲ್ಲಿ ಜಿಲ್ಲಾಮುಖಂಡ ಯಳವೇಗೌಡ,ತಾಲ್ಲೂಕು ಉಪಾಧ್ಯಕ್ಷ ಬಸವರಾಜು,ಚಿಕ್ಕ ತಮ್ಮೇಗೌಡ, ಕೆಂಪೇಗೌಡ, ಮಹದೇವ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here