ಮಂಡ್ಯ/ಮಳವಳ್ಳಿ : ಮಳವಳ್ಳಿ ಪಟ್ಟಣ ಪ್ರತಿದಿನ ಸ್ವಚ್ಚತೆ ಯಿಂದ ಇರಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಶಾಸಕ ಡಾ.ಕೆ ಅನ್ನದಾನಿ ಎಚ್ಚರಿಸಿದರು.
ಮಳವಳ್ಳಿ ಪಟ್ಟಣದ ಪುರಸಭೆ ಪಗ್ರತಿ ಪರಿಶೀಲನಾ ಸಭೆ ಶಾಸಕ ಡಾ.ಕೆ ಅನ್ನದಾನಿ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ ಕೇವಲ ಜೆಡಿಎಸ್ ಪುರಸಭೆ ಸದಸ್ಯರು ಹಾಗೂ ಅಧಿಕಾರಗಳು ಆಗಮಿಸಿದ್ದ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದರು. ಸರ್ಕಾರದ ಕೆಲಸದಲ್ಲಿ ಪಕ್ಷಬೇದ ಮೆರತು ಸಭೆಗೆ ಹಾಜರಾಗಬೇಕು. ಇದು ಪ್ರಗತಿ ಪರಿಶೀಲನಾ ಸಭೆ ಹಾಗೂ ಸದಸ್ಯರ ಸಲಹೆ ಹಾಗೂ ಕುಂದುಕೊರತೆಗಳನ್ನು ತಿಳಿದುಕೊಳ್ಳಲು ಸಭೆ ಕರೆದಿದ್ದು ಹೊರತು ಬೇರೆ ನನ್ನ ಸ್ವಾರ್ಥಕ್ಕೆ ಕರೆದಿಲ್ಲ. ವಾರ್ಡುನ ಸಮಸ್ಯೆಯನ್ಜು ಜನರ ಬಳಿ ಹೋಗಿ ತಿಳಿದುಕೊಳ್ಳುತ್ತೇನೆ. ಸದಸ್ಯರು ಸಹ ನನ್ನ ಜೊತೆಗೂಡಿ ಪಟ್ಟಣದ ಅಭಿವೃದ್ಧಿ ಗೆ ಸಹಕಾರ ನೀಡಬೇಕು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಸಭೆಗೆ ಗೈರುಹಾಜರಾಗಿದ್ದಾರೆ. ಒಂದು ವೇಳೆ ನಾವು ಗೈರುಹಾಜರಾದರೆ ಸಭೆ ನಡೆಯುವುದಿಲ್ಲ ಎಂದು ಭಾವಿಸಿದ್ದಾರೆ. ಕೋರಂ ಅವಶ್ಯಕತೆ ವಿಲ್ಲ ಇದು ಪ್ರಗತಿ ಪರಿಶೀಲನಾ ಸಭೆ ಎಂದು ಸರ್ಮಥಿಸಿಕೊಂಡರು. ಇದೇ 24 ಮತ್ತು 25 ರಂದು ಎರಡು ದಿನಗಳ ಕಾಲ ಶಾಸಕರು ವಾರ್ಡುಗಳ ಪ್ರವಾಸ ಮಾಡಿ ಜನರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ತಿಳಿದುಕೊಂಡು ಬಗೆಹರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದಕ್ಕೆ ಎಲ್ಲಾ ಸದಸ್ಯರು ಕೈ ಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸದಸ್ಯ ಮಹೇಶ ಹಾಗೂ ಚಿಕ್ಕರಾಜು ರವರು ಒಳಚರಂಡಿ ಅವ್ಯವಸ್ಯೆ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ರಿಯಾಜಿನ್, ಉಪಾಧ್ಯಕ್ಷ ಸುಮನಾಗೇಶ್. ಮುಖ್ಯಾಧಿಕಾರಿ ಮಂಜುನಾಥ ಸೇರಿದಂತೆ ಮತ್ತಿತ್ತರರು ಇದ್ದರು