ಈದ್ ಮಿಲಾದ್ ಪ್ರಯುಕ್ತ ಹಣ್ಣು ಹಂಪಲು ವಿತರಣೆ.

0
45

ಚಿಕ್ಕಬಳ್ಳಾಪುರ/ಚಿಂತಾಮಣಿ :- ದೇಶಾದ್ಯಂತ ಇಂದು ಮೊಹಮ್ಮದ್ ಪೈಗಂಬರ್ ಹುಟ್ಟು ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಈದ್-ಮಿಲಾದ್ ಆಚರಣೆ ಮಾಡುತ್ತಾರೆ.
ಈದ್ ಮಿಲಾದ್ ಪ್ರಯುಕ್ತ ನಗರದ ಫ್ರೂಟ್ ಮರ್ಚಂಟ್ ವತಿಯಿಂದ ನಗರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು.
ಮಸೀದಿ ಬಿಲಾಲ್ ಕಮೇಟಿ ಮತ್ತು ಕೆ.ಜಿ.ಎನ್ ಬಡಾವಣೆಯ ಯುವಕರಿಂದ ಸರ್ಕಾರಿ ಆಸ್ಪತ್ರೆ ಮತ್ತು ಶ್ರೀ ವಾಸವಿ ವೃದ್ದಾಶ್ರಮ, ಮದ್ರಾಸ ಮತ್ತು ಚಿಂತಾಮಣಿ ಉಪ ಕಾರಾಗೃಹದಲ್ಲಿ ಕೈದಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಫ್ರೂಟ್ ವ್ಯಾಪಾರಸ್ಥರಾದ ನಿಸಾರ್ ಅಹಮದ್, ಇನಾಯತ್, ಎಂ.ಬಿ.ಎಸ್ ಬಾಬು, ಜಮೀಲ್ ,ಅಲ್ಲಾಬಕ್ಷ್ ,ನಾರಾಯಣ ಸ್ವಾಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here