ಅದ್ದೂರಿ ಈದ್ ಮಿಲಾದ್ ಆಚರಣೆ.

0
38

ಚಿಕ್ಕಬಳ್ಳಾಪುರ/ ಚಿಂತಾಮಣಿ: ನಗರದ ಪ್ರಮುಖ ಬೀದಿಗಳಲ್ಲಿ ಮೊಹಮ್ಮದ್ ಪೈಗಂಬರ್ ರವರ ಹುಟ್ಟು ಹಬ್ಬದ ಜ್ಞಾಪಕಾಗಿ ಸರ್ಕಲ್ ಗಳಲ್ಲಿ ಧ್ವಜಾರೋಹಣ ಮಾಡಿ ದೇಶದ ಎಲ್ಲರಿಗೂ ದೇವರು ಒಳ್ಳೆಯ ಮಳೆ ,ಬೆಳೆ ಹಾಗೂ ಆರೋಗ್ಯನೀಡುವಂತಾಗಿಲಿ ಎಂದು ಪೂಜೆ ಕಾರ್ಯಕ್ರಮ ನೆರವೇರಿಸಿದರು.

ಹಜರತ್ ಮೊಹಮ್ಮದ್ ಪೈಗಂಬರ್ ಅವರು ಶಾಂತಿಪ್ರಿಯರು ಸದ್ಗುಣ ಭರಿತ ವ್ಯಕ್ತಿತ್ವವನ್ನು ಹೊಂದಿರುವವರಾಗಿದ್ದರೆ .ದಾನ ,ಪುಣ್ಯ ತ್ಯಾಗದ ಕಾರ್ಯಗಳಿಗೆ ಪ್ರೇರಣೆ ನೀಡುವುದು ಈ ಮೇಳದ ಹಿಂದಿರುವ ಉದ್ದೇಶ ಎಂದು ಜಾಮಿಯಾ ಮಸೀದಿ ಧರ್ಮಗುರುಗಳು ಹಜರತ್ ಮೌಲಾನಾ ಮುನೀಫ ರಜಾ ನಗರದ ಈದ್ಗಾ ಮೈದಾನದಲ್ಲಿ ಈದ್ ಮಿಲಾದ ಹಬ್ಬದ ಪ್ರಯುಕ್ತ (ಅಸರ್) ನಮಾಜ್ ಸಲ್ಲಿಸಿದ ನಂತರ ತಮ್ಮ ಭಾಷಣದಲ್ಲಿ
ಮಾತನಾಡಿದ ಅವರು ಇಸ್ಲಾಂ ಧರ್ಮವು ಶಾಂತಿಯುತವಾದ ಧರ್ಮ ಇಂತಹ ಈದ್ ಮಿಲಾದ್ ಸಂದರ್ಭದಲ್ಲಿ ಎಲ್ಲಾ ಜನಾಂಗ ದವರನ್ನು ಒಗ್ಗಟ್ಟಾಗಿ ಕೂಡಿಸಿ ಹಳ್ಳಿ ಹಳ್ಳಿಗಳಲ್ಲೂ ಈದ್ ಮಿಲಾದ್ ಕಾರ್ಯಕ್ರಮಗಳನ್ನು ಆಚರಿಸಬೇಕು ಎಂದರು .

ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಈದ್ ಮಿಲಾದ್ ಹಬ್ಬದ ಜುಲೂಸ್ ಮೊಹಮ್ಮದಿ ಹೆಸರಿನ ಬೃಹತ್ ಮೆರವಣಿಗೆಯನ್ನು ನಗರದ ರಾಜಬೀದಿಗಳಲ್ಲಿ ಮಕ್ಕ ಮದೀನಾ ಭಾವಚಿತ್ರ ವನ್ನು ಪ್ರದರ್ಶಿಸುವ ಮೂಲಕ ಆಚರಿಸಿದರೂ ಪೈಗಂಬರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯನ್ನು ಯಶಸ್ವಿ ಗೊಳಿಸಿದರು .

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮೂನ್ ಸ್ಟಾರ್ ಗೌಸ ಪಾಷ. ಕಾರ್ಯದರ್ಶಿ ಮಹಮ್ಮದ್ ಇನಾಯತುಲ್ಲಾ, ಶೇಕ್ ಸಾಧಿ ರಜ್ವಿ ,ಮುಜೀರ್ ಅಹಮ್ಮದ್, ಸಿಕಂದರ್ ಭಾಷಾ, ಜಮೀರ್ ಪಾಷಾ ,ಸೇರಿದಂತೆ ಹಲವಾರು ಮಸೀದಿಯ ಧರ್ಮಗುರುಗಳು ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಮೆರವಣಿಗೆಯ ಬಂದೋಬಸ್ತನ್ನು ವೃತ್ತ ನಿರೀಕ್ಷಕರಾದ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ನಿರ್ವಹಿಸಿದ್ದರು .

LEAVE A REPLY

Please enter your comment!
Please enter your name here