ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಆವರಣದ ಬಿ.ಆರ್.ಸಿ ಪಕ್ಕದಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ಚಲನಚಿತ್ರ ರಂಗ ಕಣ್ಮಣಿ, ಮತ್ತು ರಾಜಕೀಯ ಚತುರ. ರೆಬಲ್ ಸ್ಟಾರ್ ಅಂಬರೀಶ್ ರವರು ಹೃದಯಾಘಾತ ದಿಂದ ಕಳೆದ ರಾತ್ರಿ ನಿಧನರಾಗಿದ್ದರೆ ಎಂದು ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿದರು. 24 ರಂದು ಮಂಡ್ಯ ಜಿಲ್ಲೆಗೆ ಕರಾಳದಿನವಾಗಿದೆ ಪಾಂಡವಪುರ ತಾಲ್ಲೂಕಿನ 30 ಮಂದಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೊಂದು ಅಘಾತವಾದ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ರವರ ಸಾವಿನ ಸುದ್ದಿ ರಾಜ್ಯದ ಆರುವರೇ ಕೋಟಿ ಕನ್ನಡಿಗರ ಮನಸ್ಸಿನಲ್ಲಿ ಸಾಕಷ್ಟು ನೋವು ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್,ತಾ.ಅಧ್ಯಕ್ಷ ಮು.ಪಾಪಣ್ಣ , ಕಾರ್ಯ ದರ್ಶಿ ಬಿ.ಎಂ ಸುಬ್ರಕೋಶಾಥೈಕ್ಷ ,ಇಸಕ್ ಅಹಮ್ಮದ್,ಕಾಗತಿ ವೆಂಕಟ ರತ್ನಂ, ಡಾ.ರಘು, ಬಸಪ್ಪ ,ಸ್ವರ್ಣಗೌರಿ,ಸರಸ್ವತಮ್ಮ,ಮುನಿ ಕೃಷ್ಣಪ್ಪ, ನಂಜುಂಡಪ್ಪ ಉಪಸ್ಥಿತಿಯಿದ್ದರು.