ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಮತ್ತು ಸಬ್ ಕೀ ಯೋಜನಾ ಸಬ್ ಕಾ ವಿಕಾಸ್ ಅಡಿಯಲ್ಲಿ ಜನ ಯೋಜನಾ ಅಭಿಯಾನ 2019-20ರ ನಮ್ಮ ಗ್ರಾಮ ನಮ್ಮ ಯೋಜನೆಯ ಕ್ರಿಯಾಯೋಜನೆಯನ್ನು ಅನುಮೋದಿಸುವ ಇಂದು ಕಾರ್ಯಕ್ರಮ ಹಮ್ಮಿಕೊಹಮ್ಮಿಕೊಂಡಿದ್ದು ಮಕ್ಕಳ ವಿಶೇಷ ಗ್ರಾಮ ಗ್ರಾಮ ಸಭೆಯಲ್ಲಿ ಒಬ್ಬ ವಿದ್ಯಾರ್ಥಿ ಎದ್ದು ನಿಂತು ತನ್ನ ಶಾಲೆಯ ಪಕ್ಕದಲ್ಲಿ ಸ್ವಚ್ಛತೆ ಮತ್ತು ತನ್ನ ಶಾಲೆಯ ಮುಂದೆ ಇರುವ ಚರಂಡಿಯಲ್ಲಿ ಕಸಕಡ್ಡಿ ಹೆಚ್ಚಾಗಿದ್ದು ಶಾಲೆಯ ಹಿಂಭಾಗದಲ್ಲಿ ಗಿಡ ಬೆಳೆದಿದ್ದು ಇದ್ದರಿಂದ ಹಾವುಗಳು ಶಾಲೆಯ ಒಳಗಡೆ ಬರುತ್ತಿದೆ ನಾವೆಲ್ಲಾ ಭಯಭೀತರಾಗಿದ್ದು,ಮತ್ತು ನಮ್ಮ ಶಾಲೆಯ ಕಟ್ಟಡ ಹಳೆ ಕಟ್ಟಡ ಬೀಳುವ ಪರಿಸ್ಥಿತಿಯಲ್ಲಿದೆ ಇದನ್ನು ಕಟ್ಟಿಸಿಕೊಡಿ ಹಾಗೂ ಹುಡುಗನ ಒಂದು ಕನಸು ಏನು ಎಂದರೆ ಯಾರೇ ಅಷ್ಟೇ ಜಾತಿಭೇದ ಮಾಡಬೇಡಿ ಇದನ್ನು ಈಗಿರುವ ಸರ್ಕಾರವೇ ಜಾತಿಭೇದ ಮಾಡುತ್ತಿದೆ ಎಂದು ಶಾಲೆಯ ಹುಡುಗ ಹೇಳಿದು ಈ ಗ್ರಾಮ ಸಭೆಯಲ್ಲಿ ವಿಶೇಷವಾಗಿತ್ತು.
ನಂತರ ಮಾತನಾಡಿದ ಸಿ.ಡಿ.ಪಿ.ಒ ಚಿಕ್ಕನರಸಿಂಹಪ್ಪ ಅವರು ವಿಶೇಷವಾಗಿ ಮಕ್ಕಳ ಗ್ರಾಮ ಸಭೆ ಮಾಡುವ ಹಿತದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಇಲಾಖೆ ,ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ರಾಜ್ ಇಲಾಖೆ ಇವರ ಸಹಾಯದಿಂದ ಮಕ್ಕಳ ಸಭೆ ಇಂದು ಮುರುಗಮಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಇದಕ್ಕೆ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕನ್ನು 14 ನವೆಂಬರ್ 1989 ರಲ್ಲಿ ಇದನ್ನು ಚಾಲನೆ ನೀಡಿದರು. ಮಕ್ಕಳನ್ನು ಹಕ್ಕನ್ನು ನೀಡಿವುವ ಸಲುವಾಗಿ ಸರಕಾರ ಇದಕ್ಕೆ ಸಹಿ ಕೊಡ ಹಾಕಿದೆ . ಸರ್ಕಾರ ನಾಲ್ಕು ಹಕ್ಕುಗಳನ್ನು ಮಕ್ಕಳಿಗೆ ವಿಶೇಷವಾಗಿ ನೀಡಿದೆ ಒಂದು ಬದುಕುವ ಹಕ್ಕು, ವಿಕಾಸ ಹಕ್ಕು, ರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕು, ಇವು ಎಲ್ಲಾ ಹುಟ್ಟುವ ಮಗು ಯಿಂದ 18 ವರ್ಷದೊಳಗೆ ಮಕ್ಕಳನ್ನು ಹಕ್ಕನ್ನು ನೀಡಿವೆ ಎಂದು ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷ ಮುನಿರಾಜು, ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ , ಹಾಗೂ ಪಂಚಾಯತಿ ಸದಸ್ಯರು ಶಾಲೆಯ ಮುಖ್ಯಶಿಕ್ಷಕ ಪದ್ಮಮ್ಮ , ಗ್ರಾಮಸ್ಥರು ಮತ್ತು ಶಾಲೆ ಮಕ್ಕಳು ಉಪಸ್ಥಿತಿ ಇದ್ದರು.