ಬೆಂಗಳೂರು/ಮಹದೇವಪುರ;-ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 73 ವರ್ಷಗಳು ಕಳೆದರೂ ಇಂದಿಗೂ ಬಡತನ, ಅಜ್ಞಾನ ಹಾಗು ಜಾತಿಯತೆ ಇನ್ನೂ ಜೀವಂತವಾಗಿದೆ ಎಂದು ಸ್ವಾತಂತ್ರ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಅಭಿಪ್ರಾಯ ಪಟ್ಟರು.
ಭಾರತೀಯರ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 63 ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಜನುಮ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು ದೇಶದಲ್ಲಿ ಹಿಂದೂ ಧರ್ಮವನ್ನು ಬೆಳೆಸಲು ರಾಜಕೀಯ ಪಕ್ಷವೆ ಇದ್ದು ಜಾತಿಯತೆ ತಡೆಯುವಲ್ಲಿ ವಿಫಲವಾಗಿದೆ ಎಂದರು. ಮಠಗಳಿಗೆ ಜಾತಿ ಆಧಾರದ ಮೇಲೆ ಹಣ ನೀಡುವುದನ್ನು ಬಿಟ್ಟು ಬಡತನದಿಂದ ಬಳಲುತ್ತಿರುವ ಜನರಿಗೆ ಸಕರ್ಾರ ಸಹಾಯ ಮಾಡಲಿ ಎಂದರು. ನಿಜವಾದ ಜನಪ್ರತಿನಿಧಿಗಳು ಯಾರು ಇಲ್ಲ ಇದ್ದರೂ ಆಯಾ ಪಕ್ಷದ ಪ್ರತಿನಿಧಿಗಳು ಎಂದು ತಮ್ಮ ಆಕ್ರೋಶ ವ್ಯೆಕ್ತಪಡಿಸಿದರು. ರಾಜ್ಯದಲ್ಲಿ ಸಕರ್ಾರದ ಸೌಲಭ್ಯಗಳನ್ನು ಕಟ್ಟ ಕಡೆ ವ್ಯೆಕ್ತಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರತಿನಿಧಿಗಳು ಮುಂದೆ ಬರಬೇಕೆಂದರು. ಯವುದೆ ವ್ಯೆಕ್ತಿಗಳು ಸಮಾಜಕ್ಕೆ ತಾವು ನೀಡಿರುವ ಕೊಡಿಗೆಯನ್ನು ಮರೆತು ಅವರವರ ಜಾತಿಗೆ ಮೀಸಲಾಗಿಡುತ್ತಾರೆ ಅದರಂತೆ ನಮ್ಮ ದೇಶಕ್ಕೆ ಭದ್ರವಾದ ಸಂವಿಧಾನ ನೀಡಿದ ಹಾಗು ಜಾತಿಯೆಂಬ ಪಿಡುಗನ್ನು ತೊಲಗಿಸಲು ಶ್ರಮಿಸಿದ ಡಾ|| ಅಂಬೇಡ್ಕರ್ರವರನ್ನು ಒಂದೆ ಜಾತಿಗೆ ಸೀಮಿತಮಾಡಿ ಹಲವರು ಬಿಂಬಿಸುತ್ತಾರೆ ಎಂದು ಬೇಸರ ವ್ಯೆಕ್ತ ಪಡಿಸಿದರು. ಕಾರ್ಯಕ್ರಮದ ಮುಂಚೆ ಬಿ.ಎಸ್ಎಸ್ ರಾಜ್ಯ ಸಮಿತಿ ವತಿಯಿಂದ ಹೂಡಿಯ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ದೇವಿ ಮತ್ತು ಡಾ|| ಅಂಬೇಡ್ಕರ್ರವರ ಪ್ರತಿಮೆಗಳನ್ನು ಪಲ್ಲಕ್ಕಿಯಲ್ಲಿಟ್ಟು ಡೊಳ್ಳು ಕುಣಿತ, ವೀರಗಾಸೆ, ತಮಟೆವಾದ್ಯ, ಮೊಬೈಲ್ ಆಕರ್ೆಷ್ಟ್ರಾ, ಬೈಕ್ ಮತ್ತು ಆಟೋ ರ್ಯಾಲಿ ಮೂಲಕ ಕಾಲ್ನಡಿಗೆಯಲ್ಲಿ ತೆರಳಲಾಯಿತು. ನೆರದಿದ್ದವರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಭಾರತ ಜ್ಯೋತಿ ಡಾ|| ಹೆಚ್.ಎಂ.ರಾಮಚಂದ್ರರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿ ಬೆಳಗಾವಿಯ ಸದ್ಗುರು ಡಾ|| ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಆಶರ್ಿವಚನ ನೀಡಿದರು. ಈ ಸಂದರ್ಬದಲ್ಲಿ ನಲ್ಲೂರಹಳ್ಳಿ ಶ್ರೀ ನಾಗಾನಂದ ಮಹಾಸ್ವಾಮಿಗಳು, ಸಮಾಜ ಸೇವಕರಾದ ಕಿರಣ್ ಕುಮಾರ್ ರೆಡ್ಡಿ, ಚಲನಚಿತ್ರ ನಟರಾದ ರುತ್ವಿಕ್, ಬಿಎಸ್ಎಸ್ ರಾಜ್ಯ ಪದಾಧಿಕಾರಿಗಳಾದ ಚಂದ್ರಶೇಖರ್ ನಾಯ್ಡು, ಸಿ,ನಾರಾಯಣಸ್ವಾಮಿ, ಅಲ್ತಾಫ್, ನಾಗರಾಜ್(ಮೀಸೆ), ಆಂಜಿನಪ್ಪ ಯಾದವ್, ಮಹಿಳಾ ರಾಜ್ಯ ಪದಾಧಿಕಾರಿಗಳಾದ ಮಂಜುಳಾಅಕ್ಕಿ, ಶೋಭಾ, ಸ್ವಾತಿ,ಮುಖಂಡರಾದ ಹರಿಕೃಷ್ಣಯಾದವ್ ಹಾಗು ಹೂಡಿ ಗ್ರಾಮದ ಮುಖಂಡರುಗಳು ಹಾಜರಿದ್ದರು.