ಕೊನೆಗೂ…… ರಸ್ತೆ ಬದಿಯ ಅಬಲೆಗೆ ಆಶ್ರಯ ಸಿಕ್ಕಂತಾಯ್ತು.

0
145

ಬೆಂಗಳೂರು:ಮಹದೇವಪುರದ ಎಚ್.ಎಸ್.ಆರ್ ಲೇಔಟ್ ಕುಪೇಂದ್ರ ರೆಡ್ಡಿ ನಿವಾಸದ ರಸ್ತೆಯಲ್ಲಿ ಅನಾಥವಾಗಿ ಬೀದಿಯಲ್ಲಿ ಬಿದ್ದಿದ್ದ 20 ವರ್ಷದ ಮಹಿಳೆಯು ತನ್ನ ಪುಟ್ಟ ನಾಯಿ ಮರಿಯೊಂದಿಗೆ ಕಷ್ಟದ ಜೀವನ ನೆಡೆಸುತ್ತಿದ್ದ ಹೀನಸ್ಥಿತಿಯಲ್ಲಿದ್ದಾಳೆ. ಅಮ್ಮು ಎಂಬ ಈ ಮಹಿಳೆಗೆ ಇಂತಹ ಯಾವುದೇ ಭಾಗ್ಯವಿಲ್ಲದೆ ನಂಬಿದ ಗಂಡ ಕೈಬಿಟ್ಟ, ಬಂಧು ಬಳಗ, ಅಣ್ಣತಮ್ಮ ಯಾರೂ ಇಲ್ಲ. ಈ ಮುಗ್ಧ ಹುಡುಗಿಗೆ ತಾನು ಸಾಕಿದ ಪ್ರೀತಿ ನಾಯಿಯೇ ಅಸರೆ. ಈ ಮಹಿಳೆಯು ನಿತ್ಯ ಪಕ್ಕದಲ್ಲಿರುವ ಒಂದು ಸಣ್ಣ ಅಂಗಡಿಯಲ್ಲಿ ಕೆಲಸ ಮಾಡಿ ಬಂದು ಇಸ್ತ್ರಿ ಪೆಟ್ಟಿಗೆ ಅಂಗಡಿಯ ಗುಡಿಸಲಿನಲ್ಲಿ ಮಲಗುತ್ತಿದಳು ಒಂಟಿ ಹೆಂಗಸು , ಅನಾಥೆಯ ಈ ಸ್ಥಿತಿಯನ್ನು ಮಾನ್ಸಿ ಮಿಡಿತ ಫೌಂಡೇಶನ್ ಸಂಸ್ಥೆಯ ವರಿಗೆ ಸುದ್ದಿ ಮುಟ್ಟಿಸಿದ ತಕ್ಷಣವೇ ಪರಿಸರ ಮಂಜು, ಪವನ್ ಹಾಗೂ ಬೆಳ್ಳಂದೂರು ವಾರ್ಡ್‌ ಕಸಾಪ ಅಧ್ಯಕ್ಷ ನಂದಕುಮಾರ್ ಮಹಿಳಾ ಸಂಘ, ಸಂಸ್ಥೆಗಳಿಗೆ ಮಾಹಿತಿ ನೀಡಿ, ಮಹಿಳಾ ಸಹಾಯ ವಾಣಿಗೆ ದೂರು ದಾಖಲಿಸಿ, ಎಚ್.ಎಸ್‌. ಆರ್ ಲೇಔಟ್ ಪೋಲಿಸರ ಸಹಕಾರ ದಿಂದ ಅಬಲೆಗೆ ಒಂದು ಹೊಸ ಜೀವನವನ್ನು ಹಾಗೂ ಆಶ್ರಯವನ್ನು ಕಲ್ಪಿಸುವ ಕಾರ್ಯದಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದರೆ.

LEAVE A REPLY

Please enter your comment!
Please enter your name here