ಚಿಕ್ಕಬಳ್ಳಾಪುರ/ಚಿಂತಾಮಣಿ: ವಿಧಾನ ಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಾ ರೆಡ್ಡಿ ರವರ ನೇತೃತ್ವದಲ್ಲಿ ಸೋಮವಾರ ಗುದ್ದಲ್ಲಿ ಪೂಜೆ ಕಾರ್ಯ ಕ್ರಮ ನೆರವೇರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ಆರೋಗ್ಯ ಪದ್ದತಿ ಅಭಿವೃದ್ಧಿ ಮತ್ತು ಸುಧಾರಣ ಯೋಜನೆಯಡಿ ಯಲ್ಲಿ ಇರಗಂಪಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 1.40 ಕೋಟಿ ರೂ,ಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ.
ಮುಂಗಾನಹಳ್ಳಿ ಹೋಬಳಿ ಇರಗಂಪಲ್ಲಿ ಗ್ರಾಮದಲ್ಲಿ ಕೆ.ಆರ್,ಐ ಡಿ ಎಲ್ ವತಿಯಿಂದ ಅನುಷ್ಠಾನ ಗೊಳಿಸುವ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 53.48 ಲಕ್ಷಗಳ ರೂ,ಗಳ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯ ಕ್ರಮವನ್ನು ಶಾಸಕ ಎಂ ಕೃಷ್ಣಾರೆಡ್ಡಿ ನೆರವೇರಿಸಿದರು.