ಪುಡಿ ರೌಡಿಗಳಿಂದ ತಾಯಿ ಮಗನ ಮೇಲೆ ಹಲ್ಲೆ

0
209

ಬೆಂಗಳೂರು ಗ್ರಾಮಾಂತರ/ಕೆಆರ್ ಪುರ:ನಿಯಮವನ್ನು ಮೀರಿ ಮನೆ ನಿರ್ಮಿಸಿದ್ದಲ್ಲದೆ ಇದನ್ನು ಪ್ರಶ್ನಿಸಲು ಹೋದ ಪಕ್ಕದ ಮನೆಯವರ ಮೇಲೆ ರೌಡಿಗಳಿಂದ ಹಲ್ಲೆ ನಡೆಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದಾದರು ಎಲ್ಲಿ ಅಂತೀರ ಈ ಸ್ಟೋರಿ ನೋಡಿ ಹಾಡಹಗಲೆ ತಾಯಿ ಮಗನ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡುಬಂದದ್ದು ಬೆಂಗಳೂರಿನ ರಾಮಮೂರ್ತಿನಗರದ ಸರ್.ಎಂ.ವಿ ನಗರದಲ್ಲಿ. ಇಲ್ಲಿನ 15 ನೇ ಮುಖ್ಯರಸ್ತೆಯಲ್ಲಿ ಲಕ್ಷ್ಮೀಬಾಯಿ ಹಾಗೂ ಆಕೆಯ ಮಗ ರಾಜು ಎಂಬುವರು ಮನೆಯ ಪಕ್ಕದಲ್ಲಿ ದೇವಶ್ಯ ಎಂಬುವರು ಹೊಸದಾಗಿ ಮನೆ ನಿರ್ಮಿಸಿದ್ದಾರೆ. ಆದರೆ ಬಿಬಿಎಂಪಿ ನಿಯಮದ ಪ್ರಕಾರ ಎರಡು ಮನೆಗಳ ಮದ್ಯೆ 3 ಅಡಿ ಅಂತರ ಬಿಟ್ಟು ಮನೆ ನಿರ್ಮಿಸಬೇಕು. ಆದರೆ ದೇವಶ್ಯ ರವರು ಜಾಗ ಬಿಡದೆ ಮನೆ ನಿರ್ಮಿಸಿದ್ದಾರೆ ಇದನ್ನು ಪ್ರಶ್ನಿಸಲು ಮುಂದಾದ ಪಕ್ಕದ ಮನೆಯ ರಾಜು ಹಾಗೂ ಆತನ ತಾಯಿ ಲಕ್ಷ್ಮೀಬಾಯಿ ಎಂಬುವರ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆಸಿದ್ದಾರೆ. ರಾಜುರವರು ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದು ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಕಟ್ಟಡದ ಕಾಮಗಾರಿ ನಡೆಸಿದ್ದು, ಈ ವಿಚಾರಕ್ಕೆ ಸಂಬಂದಿಸಿದಂತೆ ಅಗಾಗ ಜಗಳಗಳು ನಡೆಯುತ್ತಿದ್ದು, ಇದೀಗ ನಿನ್ನೆ ಮದ್ಯಾಹ್ನ ದೇವಶ್ಯ ಕಡೆಯವರು ರಾಜು ರವರ ಮನೆಗೆ ನುಗ್ಗಿ ತಾಯಿ ಮಗನನ್ನು ಮನಬಂದದಂತೆ ಥಳಿಸಿರುವುದು ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇನ್ನು ಈ ಪ್ರಕರಣ ದೂರು ದಾಕಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಹಲ್ಲೆ ನಡೆಸಿದ ಅರೋಪಿಗಳಾದ ದೇವಶ್ಯ, ಜಾನ್ ಹಾಗೂ ಬಾಬು ಎಂಬುವರನ್ನು ಬಂದಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

LEAVE A REPLY

Please enter your comment!
Please enter your name here