ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ

0
154

ಮಂಡ್ಯ / ಮಳವಳ್ಳಿ: ಜಿಲ್ಲಾ ಆಡಳಿತ .ಆಹಾರ.ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ.ಕಾನೂನು ಮಾಪನ ಶಾಸ್ತ್ರ ಇಲಾಖೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಸಕಾ೯ರದ ವಿವಿದ ಇಲಾಖೆಗಳು ನೆಹರು ಯುವ ಕೇಂದ್ರ ಹಾಗೂ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯ ದಲ್ಲಿ ಜಿಲ್ಲಾಮಟ್ಟದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ 2017 ರ ಸಮಾರಂಭ ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ನಡೆಸಲಾಯಿತು. ಕಾಯ೯ಕ್ರಮವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಸಮಿತಿ ಅಧ್ಯಕ್ಷ ಟಿ.ಶ್ರೀ ಕಂಠ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ಪ್ರತಿಯೊಂದು ವಿಷಯದಲ್ಲಿ ಜಾಗೃತಿಯಾಗಿರಬೇಕು. ಹುಟ್ಟಿದ ಮಗು ಸಹ ಒಂದುರೀತಿ ಗ್ರಾಹಕವಿದ್ದಾಗೆ .ಗ್ರಾಹಕರಿಗೆ ಅನ್ಯಾಯವಾದರೆ ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದರು.ಇದೇ ಸಂದರ್ಭದಲ್ಲಿ ತೂಕ ಮಾಪನ ಇಲಾಖೆ ಅಧಿಕಾರಿ ಶ್ರೀಧರ್ ಗ್ರಾಹಕರಿಗೆ ಅಂಗಡಿಯವರು ತೂಕದಲ್ಲಿ ಹೇಗೆ ಮೋಸ ಮಾಡುತ್ತಾರೆ ಎಂದು ಪ್ರಾತ್ಯಕ್ಷಿಕೆ ನಡೆಸಿದರು. ಇದೇ ಸಂದರ್ಭದಲ್ಲಿ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಗ್ರಾಹಕರ ಕ್ಲಬ್. ಹಾಗೂ ಮಕ್ಕಳಿಗೆ ಲಸಿಕೆ ಕಾಯ೯ಕ್ರಮ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ರಿಯಾಜಿನ್ ವಹಿಸಿದ್ದರು. ಸಮಾರಂಭದಲ್ಲಿ ಆಹಾರ ನಾಗರೀಕ‌ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿದೇ೯ಶಕಿ ಕುಮುದಾಶರತ್. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಎಂ.ಕೆ ಲಲಿತ, ಸಹಾಯಕ ನಿಯಂತ್ರಕ ರಾಜೀವ್, ವಿದ್ಯಾಪ್ಯಾರ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್, ಶ್ರೀನಿವಾಸ, ರಾಮಚಂದ್ರ, ನಾಗರಾಜು, ಹಾಜರಿದ್ದರು.

LEAVE A REPLY

Please enter your comment!
Please enter your name here