ಪದವಿ ಪ್ರಧಾನ ಸಮಾರಂಭ

0
220

ಬೆಂಗಳೂರು/ಹೊಸಕೋಟೆ: ಮಹಿಳೆಯರಲ್ಲಿ ಉತ್ತಮ ಪ್ರತಿಭೆಯಿದ್ದು ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಸಮಾಜಕ್ಕೆ ಮಹಿಳಯರು ಕೊಡುಗೆಯಾಗಲು ಅನುವು ಮಾಡಬೇಕೆಂದು ರಾಜ್ಯಪಾಲ ವಜೂಬಾಯಿ ವಾಲ ಅಭಿಪ್ರಾಯಪಟ್ಟರು.

ಕ್ಷೇತ್ರದ ಎಮ್ವಿಜೆ ಮೆಡಿಕಲ್ ಕಾಲೇಜ್ ರಿಸರ್ಚ್ ಸೆಂಟರ್ನಲ್ಲಿಂದು ಆಯೋಜಿಸಿದ್ದ ವೈದ್ಯಕೀಯ ಅಂತಿಮ ವರ್ಷದ ಪದವಿ ಪ್ರಧಾನ ಸಮಾರಂಭಕ್ಕೆ ರಾಜ್ಯಪಾಲರಾದ ವಜುಬಾಯಿ ವಾಲಾ ದೀಪಬೆಳಗಿಸಿ ಚಾಲನೆ ನೀಡಿದರು. ಇದೆ ವೇಳೆ ಮಾತನಾಡಿದ ಅವರು, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಇಂದಿನ ದಿನಗಳಲ್ಲಿ ಉತ್ತಮ ಸಾಧನೆಗೈಯುತ್ತಿದ್ದ ಅವರಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯ ಅಗತ್ಯವಿದೆ ಅದನ್ನು ಒದಗಿಸುವಲ್ಲಿ ಸಕರ್ಾರ ಕ್ರಮಕೈಗೊಳ್ಳಬೇಕಿದೆ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಪದವಿ ಪ್ರಶಸ್ತಿಗಳು ಶಿಕ್ಷಣದ ಗುಣಮಟ್ಟವನ್ನು ಮಾತ್ರ ಅಳಿಯುತ್ತದೆ. ಆದರೆ ಆ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತವಾದಾಗ ಮಾತ್ರ ಈ ಎಲ್ಲಾ ಪ್ರಶಸ್ತಿಗಳಿಗೂ ಗೌರವದಕ್ಕಲಿದೆ ಎಂದರು. ಮಹಿಳೆಯರಲ್ಲಿ ಉತ್ತಮ ಪ್ರತಭೆಯಿದೆ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದರು. ಶೈಕ್ಷಣಿಕ ಗುಣಮಟ್ಟದಲ್ಲಿ ಪಡೆದ ಚಿನ್ನದ ಪದಕಕ್ಕಿಂತ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಜನ ಸೇವೆ ಮಾಡುವಂತೆ ಸಲಹೆ ನೀಡಿದರು. ಚಿಕಿತ್ಸೆ ಅಗತ್ಯವಿರುವ ಬಡರೋಗಿಗಳಿಗೆ  ಸೂಕ್ತ ರೀತಿಯ ಸೇವೆ ಮಾಡುವ ಮೂಲಕ ಆರೋಗ್ಯಯುಕ್ತ ಸಮಾಜ ನಿಮಾಣ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಮ್ವಿಜೆ ಸಂಸ್ಥೆಯ ಅಧ್ಯಕ್ಷ ಎಮ್.ಜೆ.ಮೋಹನ್, ಕಾರ್ಯನಿರ್ಧೇಶಕ ಪಿ.ಮೋಹನ್ ರಾವ್, ಮುಖ್ಯ ಕಾರ್ಯದಶರ್ಿ ಧರಣಿ, ಪ್ರಾಂಶುಪಾಲರಾದ ಟಿ.ಎಸ್.ರಘುರಾಮನ್ ಸೇರಿದಂತೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here