ಆತಂಕ ಬಿಟ್ಟು, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ.

0
162

ಚಿಕ್ಕಬಬಳ್ಳಾಪುರ/ ಗುಡಿಬಂಡೆ: ಕ್ಷಯ ರೋಗದ ಬಗ್ಗೆ  ರೋಗಿಗಳು ಆತಂಕ ಗೊಳ್ಳದೆ ಸೂಕ್ತ ಚಿಕಿತ್ಸೆ  ಪಡೆದು ಗುಣವಂತರಾಗಬಹುದೆಂದು ಪ.ಪಂ. ಆಧ್ಯಕ್ಷ ಚಂದ್ರಶೇಖರ್ ನಾಯ್ಡು ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಪ್ರಯುಕ್ತ ನಡೆದ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನೈರ್ಮಲ್ಯದಕೊರತೆ, ಕಳಪೆ ಆಹಾರ ಸೇವನೆಯಿಂದ ಇಂದು ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ನೆಲ ಜಲವನ್ನು  ಸಂರಕ್ಷಿಸಿ  ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಕ್ಷಯರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಕಾರ್ಯವಾಗಬೇಕು.ಆಸ್ಪತ್ರೆಗಳಲ್ಲಿ ಪ್ರತಿ ನಿತ್ಯ ನೂರಾರು ರೋಗಿಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ. ಅವರನ್ನು ಆತುರದಿಂದ ತಪಾಸಣೆ ಮಾಡದೆ ಟಿ.ಬಿ. ಲಕ್ಷಣಗಳಿರುವವರನ್ನು ತಾಳ್ಮೆಯಿಂದ ಪರೀಕ್ಷೆಗೊಳಪಡಿಸಿ  ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.ನಂತರ ಮಾತನಾಡಿದ ತಾಲೂಕು  ಆರೋಗ್ಯಾಧಿಕಾರಿ ಡಾ.ಮಹಿಮಾ, ಹಿಂದಿನ ಕಾಲದಲ್ಲಿ ಈರೋಗದ ಬಗ್ಗೆ ಜನರಲ್ಲಿ ಅನೇಕ ಸಂಶಯಗಳಿತ್ತು. ಹೀಗಾಗಿ ಇಂಥ ರೋಗಿಗಳನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು. ಆದರೆ ವೈದ್ಯಕೀಯ ಲೋಕದ ಅನೇಕ ಆವಿಷ್ಕಾರಗಳಿಂದ ಇಂದು ಬಹುತೇಕಎಲ್ಲಾ ಬಗೆಯ  ಕಾಯಿಲೆಗಳಿಗೂ ಚಿಕಿತ್ಸೆ ಲಭ್ಯವಿದೆ. ಹೀಗಾಗಿ ಕ್ಷಯರೋಗ ಪೀಡಿತರು ತಮ್ಮಹತ್ತಿರದ ಡಾಟ್ ಕೇಂದ್ರಗಳಲ್ಲಿ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದು  ಕಾಯಿಲೆ ವಾಸಿಮಾಡಿ ಕೊಳ್ಳಬಹುದಾಗಿದೆ ಎಂದರು.
ಈ ಮ್ಯಾರಥಾನ್ ಓಟದಲ್ಲಿ ಆಸ್ಪತ್ರೆಯ ಸಿಬ್ಬಂದಿ,
ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆ  ಆಡಳಿತಾಧಿಕಾರಿ ಡಾ.ನರಸಿಂಹಮೂರ್ತಿ,ಆರೋಗ್ಯ ನಿರೀಕ್ಷಕ ನರಸಿಂಹಯ್ಯ, ಆಸ್ಪತ್ರೆಯ ಸಿಬ್ಬಂದಿಯಾದ ಸುನೀಲ್, ಸುದರ್ಮನ್,ನಾಗರಾಜ್, ಗೀತಾಂಜಲಿ, ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here