ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ: ಮದುವೆಗಳನ್ನು ವಿಜೃಂಭಣೆ ಯಿಂದ ಮಾಡಿಕೊಳ್ಳುವುದು ಕೇವಲ ಆಡಂಬ ರಕ್ಕೆ, ಶ್ರೀಮಂತಿಕೆಯ ತೋರಿಕೆಗಾಗಿ ಎಂದು ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಆದಿಚುಂಚನ ಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ನಿಮಾ೯ಲಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದ ಶ್ರೀ ವೆಂಕಟೇಶ್ವರ ದಿವ್ಯ ಸನ್ನಿಧಿ ಆವರಣದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಅಧ್ಯಕ್ಷರಾದ ಆಂಜಿನಪ್ಪ ಪುಟ್ಟು ರವರ ಸಾರಥ್ಯದಲ್ಲಿ 73 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಮದುವೆಗಳನ್ನು ವಿಜೃಂಭಣೆಯಿಂದ ಮಾಡಿಕೊಳ್ಳುವುದು ಕೇವಲ ಆಡಂಬರಕ್ಕೆ. ಆದರೆ, ಇಂಥ ಧಾರ್ಮಿಕ ಕೇಂದ್ರಗಳಲ್ಲಿ ವಿವಾಹವಾದಾಗ ಸಿಗುವ ಸೌಭಾಗ್ಯ ಎಷ್ಟೇ ಹಣ ಖರ್ಚು ಮಾಡಿ ಮದುವೆ ಯಾದರೂ ಸಿಗುವುದಿಲ್ಲ ಬಡತನದಿಂದ ಬಳಲಿದ ಕುಟುಂಬಗಳಿಗೆ ಇಂಥ ಸರಳ ವಿವಾಹಗಳು ಕೈ ಹಿಡಿಯುತ್ತವೆ. ಇಂಥ ಪುಣ್ಯ ಕಾರ್ಯಕ್ಕೆ ಶ್ರೀ ಆಂಜಿನಪ್ಪ ಪುಟ್ಟು ರವರು ಮುಂದಾಗಿರುವುದು ಶ್ಲಾಘನೀಯ.
ಜಿಲ್ಲಾ ಶಾಶ್ವತ ನೀರಾವರಿ ಹೋರಾಟಗಾರ ಆಂಜಿನೇಯ ರೆಡ್ಡಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗಾಗಿ ಆಯೋಜಿಸುವಂಥದ್ದು. ಇಲ್ಲಿ ಎಲ್ಲರನ್ನೂ ಸಮನಾಗಿ ಕಾಣಲಾಗುತ್ತದೆ. ಇಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ಅತ್ತೆ ಮಾವಂದಿ ರನ್ನು ಹೆತ್ತವರಂತೆ ಕಾಣಬೇಕು. ಇಂಥ ಪುಣ್ಯ ಕ್ಷೇತ್ರಗಳಲ್ಲಿ ಮದುವೆಯಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಅರಿತು ಸುಖವಾಗಿ ಬಾಳಿ ಎಂದರು