ಚಿತ್ರಮಂದಿರದ ಮುಂದೆ ದಾಂದಲೆ

0
337

ಬಳ್ಳಾರಿ/ಹೊಸಪೇಟೆ.:ರಾಾಜಕುಮಾರ ಚಿತ್ರ ವೀಕ್ಷಣೆಗೆ ಬಂದ ಪುನಿತ್ ಅಭಿಮಾನಿಗಳು ಚಿತ್ರ ಮಂದಿರದ ಮುಂದೆ ದಾಂದಲೆ ಮಾಡಿದ ಘಟನೆ ನಗರದ ಬಾಲಾಜಿ ಚಿತ್ರ ಮಂದಿರದ ಮುಂಭಾಗ ನಡೆದಿದೆ.
ನಗರದ ಹಂಪಿ ರಸ್ತೆಯಲ್ಲಿನ ಚಿತ್ರಮಂದಿರದ ಬಳಿ ಸೇರಿದ ಸಾವಿರಾರು ಅಭಿಮಾನಿಗಳು ಚಿತ್ರ ಮಂದಿರದ ಮುಂದೆ ಅಂಟಿಸಿದ್ದ ಇಂಗ್ಲೀಷ್ ಚಿತ್ರದ ವಾಲ್ ಪೋಸ್ಟರ್ ತೆರವುಗೊಳಿಸುವಂತೆ ಮತ್ತು ಮಧ್ಯರಾತ್ರಿಯಿಂದಲೆ ಚಿತ್ರ ಪ್ರಾರಂಭ ಮಾಡುವಂತೆ ಪಟ್ಟು ಹಿಡಿದು ಗೇಟ್ ಮುರಿದು ಒಳನುಗ್ಗಲು ಯತ್ನಿಸಿದ್ದಾರೆ. ಪೋಲಿಸರು ಅಭಿಮಾನಿಗಳ ನಿಯಂತ್ರಣಕ್ಕೆ ಹರ ಸಾಹಸ ಪಡಬೇಕಾಯಿತು.ಕೆಲವು ಕಿಡಿ ಗೇಡಿಗಳು ಪೋಲಿಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ರು.ಇನ್ನು ಕೆಲವರು ರಸ್ತೆ ಬದಿಯ ಬೀದಿ ದೀಪಗಳನ್ನ ಕಲ್ಲಿನಿಂದ ಹೊಡೆದು ನಾಶಪಡಿಸಿದ್ರು.ಕೆಲವು ಕಿಡಿಗೇಡಿಗಳಿಂದ ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ. ಪೋಲಿಸ್ ಪೇದೆಯ ತಲೆಗೆ ಗಂಭೀರ ಗಾಯವಾಗಿದ್ದು ಗಾಯಾಳು ಪೇದೆಯನ್ನ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಆರುಜನ ಜನ ಯುವಕರನ್ನು ಪೋಲಿಸರ ವಶಕ್ಕೆ ತೆಗೆದುಕೊಳ್ಳಲಾಗಿದೆ .

ಒಟ್ಟಿನಲ್ಲಿ ಹುಚ್ಚು ಅಭಿಮಾನಿಗಳ ಹುಂಬತನದಿಂದ ಜನಸಾಮಾನ್ಯರು ಮತ್ತು ಪೋಲಿಸ್ ಸಿಬ್ಬಂದಿಗಳು ತೊಂದರೆ ಅನುಭವಿಸುವಂತಾಗಿದ್ದು ಒಂದು ದುರಂತ.

LEAVE A REPLY

Please enter your comment!
Please enter your name here