ಕೆ(ಕ)ಟ್ಟಪ್ಪನ ಪ್ರತಿಕೃತಿ ದಹನ, ಪ್ರತಿಭಟನೆ

0
177

 

ಬೆಂ,ಗ್ರಾಮಾಂತರ/ ದೊಡ್ಡಬಳ್ಳಾಪುರ : ಕರುನಾಡಿಗೆ ಋಣಿಯಾಗಿರಬೇಕಾದ  ತಮಿಳುನಾಡಿನ ನೀತಿಗೆಟ್ಟ ಜನ ಕರ್ನಾಟಕದ ಮೇಲೆ ತಮ್ಮ  ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟ ಬಣದ ಬೆಂ,ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಜಘಟ್ಟ ರವಿ ಆಕ್ರೋಶ ವ್ಯಕ್ತಪಡಿಸಿದರು ,

ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಕ ರ ವೇ ಪ್ರವೀಣ್ ಕುಮಾರ ಶೆಟ್ಟಿ ಬಣದ ಕಾರ್ಯಕರ್ತರು  ಬಾಹುಬಲಿ ಭಾಗ 2 ಚಿತ್ರದ  ತಮಿಳು ಕಲಾವಿದ ಸತ್ಯರಾಜ್ ಕರ್ನಾಟಕದ ಜೀವನದಿ ಕಾವೇರಿ ವಿಚಾರದಲ್ಲಿ  ಕರ್ನಾಟಕವನ್ನು ಹೀನಾಮಾನವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಕಟ್ಟಪ್ಪನ ಪ್ರತಿಕೃತಿ ದಹನ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಾಡಿನ ಜನರ ಹಣದಿಂದ ಬದುಕುತ್ತಿರುವ  ಕನ್ನಡ ವಿರೋಧಿ ಸತ್ಯರಾಜ್ ಅಭಿನಯಿಸಿರುವ ಚಿತ್ರಗಳನ್ನು ಕರ್ನಾಟಕದ ಯಾವುದೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ವೇದಿಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೆ (ಕ)ಟ್ಟಪ್ಪನ ವಿರುದ್ದ ಘೋಷಣೆಗಳನ್ನು ಕೂಗಿದರು. ನಂತರ ನಗರದ ಚಿತ್ರಮಂದಿರಗಳಿಗೆ ತೆರಳಿ ಬಾಹುಬಲಿ ಭಾಗ 2 ಚಿತ್ರವನ್ನು ಪ್ರದರ್ಶನ ಮಾಡದಂತೆ ಮನವಿನೀಡಿದರು.ಒಂದು ವೇಳೆ ಎಚ್ಚರಿಕೆಯನ್ನು ಉಲ್ಲಂಘಿಸಿದರೆ ಮುಂದೆ ನಡೆಯಬಹುದಾದ ಅನಾಹುತಗಳಿಗೆ ನೀವೆ ನೇರ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ   ಕರವೇ  ತಾಲ್ಲೂಕು  ಅಧ್ಯಕ್ಷ ಪು.ಮಹೇಶ್, ಪ್ರ,ಕಾರ್ಯದರ್ಶಿ ಬಷೀರ್, ಹಮಾಮ್ ಪ್ರಕಾಶ್, ನಗರ ಅಧ್ಯಕ್ಷ ಎಸ್,ಕೆ.ಸತೀಶ್ ಕಾರ್ಯದರ್ಶಿ ಸುಬ್ರಮಣಿ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here