ನೀರಿನ ಸಮಸ್ಯೆ ಬಂಡ್ ತೆರವ

0
122

ಬಳ್ಳಾರಿ/ ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದಿರಿಸುತ್ತಿದ್ದು. ಪಟ್ಟಣಕ್ಕೆ ಬರುವ ನೀರಿಗೆ ರೈತರು ನಿರ್ಮಿಸಿದ್ದ ಬಂಡ್ ನ್ನು ಪಟ್ಟಣ ಪಂಚಾಯತ್ ಅಧಿಕಾರಿಗಳು ಪೊಲೀಸ್ ಬಂದೋ ಬಸ್ತ್ ನೊಂದಿಗೆ ತೆರವುಗೊಳಿಸಿದರು.

ಹೊಸಪೇಟೆ ಚಿತ್ತವಾಡ್ಗಯಿಂದ ಆರಂಭಗೊಂಡಿರುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಬಿಟ್ಟ ನೀರನ್ನು ರೈತರು ರಿಂಗ್‍ಬಂಡ್ ಹಾಕಿ ತಡೆ ಹಿಡಿದಿದ್ದರು.
ಅದಕ್ಕಾಗಿ ಪಟ್ಟಣ ಪಂಚಾಯತಿ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು
ಪೋಲಿಸ್‍ ಬಂದೋಬಸ್ತ್ ನೊಂದಿಗೆ ತೆರಳಿ ರಿಂಗ್ ಬಂಡ್ ತೆರವುಗೊಳಿಸಿದರು.
ಇದರಿಂದ ಯುಗಾದಿ ಹಬ್ಬದಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಅಲ್ಪ ಪ್ರಮಾಣದ ಪರಿಹಾರ ದೊರೆತಂತಾಗಿದೆ.

LEAVE A REPLY

Please enter your comment!
Please enter your name here