ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 30ನೇ ವಾರ್ಷಿಕೋತ್ಸವ

0
117

 

ಹೊಸಪೇಟೆ: ನೆಹರು ಕಾಲೋನಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 30ನೇ ವಾರ್ಷಿಕೋತ್ಸವ ನಿಮಿತ್ತ ಏ.2ರಂದು ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.

7ಕ್ಕೆ ಬೆಳಗಿನ ಪೂಜೆ ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಮೆಗೆ ಅಭಿಷೇಕ, ಅಲಂಕಾರ ವಿಶೇಷ ಪೂಜೆ ನೆರವೇರಿಸಲಾಗುವುದು. ಬೆಳಿಗ್ಗೆ 8ರಿಂದ 12ಗಂಟೆ ವರಗೆ ಕಳಸಾಭಿಷೇಕ ಹಾಗೂ ಮದ್ಯಾನ್ಹದ ಪೂಜೆ 12-30ಕ್ಕೆ ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 8-30ಕ್ಕೆ ರಾತ್ರಿ ಪೂಜೆ, ಮಂಗಳಾರತಿ, ರಾತ್ರಿ 8-45ಕ್ಕೆ ಹರಿವಾರಸನಂ ನಡೆಯಲಿದೆ. ಅಯ್ಯಪ್ಪ ದೇವಸ್ಥಾನ ಸಮಿತಿವತಿಯಿಂದ ಆಯೋಜಿಸಿರುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಸದ್ಭಕ್ತರು ಕುಟುಂಬ ಸಮೇತವಾಗಿ ಭಾಗವಹಿಸುವ ಮೂಲಕ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ದೇವಸ್ಥಾನದ ಪ್ರಧಾನ ಆರ್ಚಕರಾದ ಶಂಕರ ನಂಬೂದರಿ ಕೋರಿದ್ದಾರೆ.

LEAVE A REPLY

Please enter your comment!
Please enter your name here