ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ

0
131

ಕೋಲಾರ/ಬಂಗಾರಪೇಟೆ; ಪಟ್ಟಣದ ಎಸ್ ವಿ ಆರ್ ಗ್ಲೋಬಲ್ ಶಾಲೆಯಲ್ಲಿ ಉಚಿತ ಶಿಕ್ಷಣ, ಗುಣಮಟ್ಟದ ಶಿಕ್ಷಣಕ್ಕೆ ಮೆಚ್ಚುಗೆ, ಇಂಗ್ಲಿಷ್ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ, ಕೆಲವು ಕಾನ್ವೆಂಟ್ ಶಾಲೆಗಳು ದೊಡ್ಡ ದಂಧೆಯಾಗಿ ಪರಿವರ್ತನೆ ಆಗುತ್ತಿವೆ ಅಪರೂಪಕ್ಕೆ ಕೆಲವು ಶಿಕ್ಷಣ ಸಂಸ್ಥೆಗಳು ಶಾಲೆ ನಡೆಸುವುದು ಸಮಾಜ ಸೇವೆ ಆಗಿರುವುದನ್ನೂ ಗಮನಿಸಿದ್ದೇವೆ, ಇದಕ್ಕೊಂದು ಉದಾಹರಣೆ ಇಲ್ಲಿನ ಎಸ್ ವಿ ಆರ್ ಗ್ಲೋಬಲ್ ಶಾಲೆ ಆಗಿದೆ, 2011-12 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಎಲ್ ಕೆ ಜಿ ಯಿಂದ ಪ್ರಾರಂಭಗೊಂಡು ಈಗ ಏಳನೇ ತರಗತಿ ವರೆಗೆ 220 ವಿದ್ಯಾರ್ಥಿಗಳು ಉಚಿತ ವ್ಯಾಸಂಗ ಮಾಡುತ್ತಿದ್ದಾರೆ, ಶಿಕ್ಷಣ ಅಲ್ಲದೆ ಇತರೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ.ಪ್ರತಿ ತಿಂಗಳು ಕಟ್ಟಡ ಕ್ಕೆ ಹತ್ತು ಸಾವಿರ ಬಾಡಿಗೆ ನೀಡಲಾಗುತ್ತಿದೆ, ಹನ್ನೊಂದು ಜನ ಸಿಬ್ಬಂದಿ ಇದ್ದಾರೆ, ಪ್ರತಿ ಮಗುವಿಗೆ ವಾರ್ಷಿಕವಾಗಿ ಹನ್ನೊಂದು ಸಾವಿರ ರೂ.ವೆಚ್ಚ ತಗಲುತ್ತದೆ.ಶಾಲೆಯ ಎಂಟು ಕೊಠಡಿಯಲ್ಲಿ ಸಿಸಿಟಿವಿ ಅಳವಡಿಸಿ ಶೈಕ್ಷಣಿಕ ಗುಣಮಟ್ಟ ಕಾಪಾಡಲಾಗಿದೆ.ಮುಂದಿನ ಹಂತದಲ್ಲಿ ಪ್ರೌಢಶಾಲಾ ಮಕ್ಕಳಿಗೂ ನಮ್ಮ ಶಾಲೆಯಿಂದ ಉಚಿತ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್ . ವೆಂಕಟರಮಣ ನಮ್ಮೂರು ಟಿವಿಗೆ ತಿಳಿಸಿದರು.

 

LEAVE A REPLY

Please enter your comment!
Please enter your name here