ಬಿರುಬಿಸಿಲ ಎಫೆಕ್ಟ್ ಶಿಶುಗಳಿಗೆ ವಿವಿಧ ರೋಗ

0
147

ಬಳ್ಳಾರಿ : ಕೆಂಡದ ಬಿಸಲಿಗೆ ಹೆದರಿದ ಮಕ್ಕಳು ಪ್ರತಿದಿನ 10ಕ್ಕೂ ಹೆಚ್ಚು ಮಕ್ಕಳು ಬಿಸಿಲು ಪರಿಣಾಮ ವಿಮ್ಸ್ ಗೆ ದಾಖಲು

* ಏಪ್ರಿಲ್ ಆರಂಭದಲ್ಲಿಯೇ ಶುರುವಾಯಿತು ಬಿಸಿಲ ಎಫೆಕ್ಟ್* ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಬಿಸಿಲ ಬೇಗೆಗೆ ಬಳಲಿದವರಿಗೆ ಚಿಕಿತ್ಸೆ* ಪೋಷಕರೇ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಬೇಡಿ..
ನಿಮ್ಮ ಮಕ್ಕಳನ್ನು ಬಿಸಿಲಿಗೆ ಹೊರಗೆ ಕರೆದುಕೊಂಡು ಹೋಗಬೇಡಿ. ಅದರಲ್ಲೂ ನವಜಾತ ಶಿಶುಗಳನ್ನು ಅಪ್ಪಿತಪ್ಪಿ ಹೊರಗೆ ಕರೆದುಕೊಂಡು ಹೋದೀರಿ ಜೋಕೆ. ಯಾಕೆಂದರೆ ಬಳ್ಳಾರಿ ಬಿರುಬಿಸಿಲಿಗೆ ಪ್ರತಿದಿನ ಕನಿಷ್ಟ 10 ಕ್ಕೂ ಹೆಚ್ಚು ಮಕ್ಕಳು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬೇಸಿಗೆ ಪರಿಣಾಮದಿಂದ ಮಕ್ಕಳಿಗೆ ಕಿಡ್ನಿ ವೈಫಲ್ಯದ ಸಮಸ್ಯೆ ಎದುರಾಗುತ್ತಿದೆ.
ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಬಿರುಬೇಸಿಗೆ ಹೊಡೆತಕ್ಕೆ ಬಳಲುತ್ತಿವೆ. ಬಳ್ಳಾರಿಯ ಕೆಂಡದಂಥ ಬಿಸಿಲಿಗೆ ಮಕ್ಕಳು ಬೆದರುತ್ತಿವೆ. ಪ್ರತಿದಿನ ಕನಿಷ್ಟ ಏನಿಲ್ಲವೆಂದರೂ 10ಕ್ಕೂ ಹೆಚ್ಚು ಮಕ್ಕಳು ಅತಿ ಬಿಸಿಲ ಬೇಗೆಗೆ ವಿವಿಧ ರೋಗಗಳಿಗೆ ವಿವಿಧ ರೋಗಗಳಿಗೆ ಬಳಲುತ್ತಿವೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಬಳ್ಳಾರಿಯಲ್ಲಿ 40 ಡಿಗ್ರಿ ಉಷ್ಣಾಂಶ ಮೀರುತ್ತಿದೆ. ನಿರ್ಜಲೀಕರಣದಿಂದಾಗಿ ಮಕ್ಕಳ ದೇಹದ ಮೇಲೆ ಎಲ್ಲ ಬಗೆಯ ಪರಿಣಾಮ ಬೀರುತ್ತಿವೆ. ಗರಿಷ್ಟ ಉಷ್ಣತೆಯಿಂದಾಗಿ ಮಕ್ಕಳು ಮೂತ್ರ ಪಿಂಡ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಡಾ. ಮರಿರಾಜ್ ಹೂಗಾರ್, ಪ್ರಭಾರ ವಿಮ್ಸ್ ಅಧೀಕ್ಷಕ ಹೇಳುವಂತೆ
ಮಾತನಾಡಲು ಬಾರದ ಆಗ ಹುಟ್ಟಿದ ಕಂದಮ್ಮಗಳು, ಪುಟ್ಟ ಪುಟ್ಟ ಮಕ್ಕಳಿಗೆ ಕೆಂಡದಂಥ ಬಿಸಿಲಿಗೆ ಜೀವಕ್ಕೆ ಸಂಚಕಾರ ಉಂಟಾಗಿದೆ. ಪುಣ್ಯಕ್ಕೆ ಇದುವರೆಗೆ ಯಾವ ಮಕ್ಕಳು ಜೀವ ಕಳೆದುಕೊಂಡಿಲ್ಲ. ಕೇವಲ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಪ್ರತಿದಿನ 10ಕ್ಕೂ ಹಚ್ಚು ಮಕ್ಕಳು ಬೇಸಿಗೆ ಸಂಬಂಧಿ ಕಾಯಿಲೆಗಳಿಂದ ಬಳಲುವವರು ದಾಖಲಾಗುತ್ತಿದ್ದರೆ, ಇನ್ನೂ ನಗರದಲ್ಲಿರುವ 48 ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೆಷ್ಟು ಮಕ್ಕಳು ಬೇಸಿಗೆ ಸಂಬಂಧಿ ಕಾಯಿಲೆಯಿಂದ ಬಳಲುವ ಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ. ಸದ್ಯ ಅತಿ ಉಷ್ಣತೆ, ನಿರ್ಜಲೀಕರಣ ಸೇರಿದಂತೆ ವಿವಿಧ ಬೇಸಿಗೆ ಸಂಬಂಧಿ ಕಾಯಿಲೆಗಳಿಗೆ ಬಳಲುವವ ಮಕ್ಕಳನ್ನು ಬಳ್ಳಾರಿಯ ವಿಮ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಡಾ. ಮರಿರಾಜ್ ಹೂಗಾರ್, ಪ್ರಭಾರ ವಿಮ್ಸ್ ಅಧೀಕ್ಷಕ ಹೇಳಿಕೆ
ಪ್ರತಿ ವರುಷ ಏಪ್ರಿಲ್ ತಿಂಗಳಂತ್ಯಕ್ಕೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ 20ರಿಂದ 30 ಮಕ್ಕಳು ಬೇಸಿಗೆ ಸಂಬಂಧಿ ರೋಗಿಗಳು ದಾಖಲಾಗುತ್ತಿದ್ದರು. ಆದರೆ ಕಳೆದೊಂದು ತಿಂಗಳಿನಿಂದ ಬೇಸಿಗೆ ಹೊಡೆತಕ್ಕೆ ಶಿಶು ಸೇರಿದಂತೆ ಪುಟ್ಟ ಪುಟ್ಟ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯರು ಸಲಹೆಯಂತೆ ಮಕ್ಕಳನ್ನು ಆದಷ್ಟು ಹೊರಗಡೆ ಕರೆದುಕೊಂಡು ಹೋಗಬೇಡಿ, ಮಧ್ಯಾಹ್ನ ಆಟವಾಡಲು ಬಿಡಬೇಡಿ, ಸಾಧ್ಯವಾದಷ್ಟು ನೀರು, ಜ್ಯೂಸ್ ಕುಡಿಸಿ ಎಂಬುದೇ ಕಳಕಳಿ.

 

LEAVE A REPLY

Please enter your comment!
Please enter your name here