ವಿಶ್ವ ಆರೋಗ್ಯ ದಿನಾಚರಣೆ

0
127

ಮಂಡ್ಯ/ಮಳವಳ್ಳಿ: ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ವತ್ರೆ ಮತ್ತು ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾಯ೯ಕ್ರಮ ನಡೆಸಲಾಯಿತು . ಕಾಯ೯ಕ್ರಮ ವನ್ನು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಭದ್ರಪ್ಪ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕಾಯ೯ಕ್ರಮ ದಬಗ್ಗೆ ಮನೆ ಮನೆಗೂ ತೆರಳಿ ಅರಿವು ಮೂಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು ಇದೇ ಸಂದಭ೯ದಲ್ಲಿ ವಿದ್ಯಾಪ್ಯಾರ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್ ಮಾತನಾಡಿ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದ ಅವರು ಖಿನ್ನತೆ ಬಗ್ಗೆ ಆಶಾ ಕಾರ್ಯಕರ್ತೆ ಯರು ಜಾಗೃತಿ ಮೂಡಿಸುವಂತೆ ತಿಳಿಸಿದರು. ಕಾಯ೯ಕ್ರಮ ದಲ್ಲಿ ಜಿಲ್ಲಾ ಆಶಾ ಮೇಲ್ವೀಚಾರಕಿ ಸುಮತಿ . ಕರುಣ ವೀರಣ್ಣಗೌಡ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here