ಗ್ಯಾಸ್ ದಂದೆ ವಿರುದ್ಧ ಕರವೇ ಪ್ರತಿಭಟನೆ

0
139

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ಸುರಭಿ ಗ್ಯಾಸ್ ಏಜೆನ್ಸಿ ಮುಂದೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಪ್ರತಿಭಟನೆ. ಭಾರತ್ ಗ್ಯಾಸ್ ಸುರಭಿ ಏಜೆನ್ಸಿಯ ಸಿಬ್ಬಂದಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಪು.ಮಹೇಶ್ ನಗರದಲ್ಲಿನ ಭಾರತ್ ಗ್ಯಾಸ್ ನ ಮೂರು ಏಜೆನ್ಸಿಗಳಾದ ಮಂಜುನಾಥ ಏಜೆನ್ಸಿ, ನರಸಿಂಹಯ್ಯ ಏಜೆನ್ಸಿ ಮತ್ತು ಸುರಭಿ ಏಜೆನ್ಸಿಗಳು ಸರ್ಕಾರ ಗ್ಯಾಸ್ ಸಿಲಿಂಡರ್ ಗೆ ನಿಗಧಿಪಡೆಸಿರುವ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಾಮಾಡಿದರು. ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರೊಂದಿಗೆ ಗ್ರಾಹಕರು ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here