ಸಾಲ ಭಾದೆಗೆ ರೈತ ಬಲಿ

0
129

ಮಂಡ್ಯ/ಮಳವಳ್ಳಿ: ಸಾಲಭಾದೆ ತಾಳಲಾರದೆ ಹಾಗೂ ಬೋರ್ ವೆಲ್ ನಲ್ಲಿ ನೀರುಬಾರದ ಹಿನ್ನಲೆಯಲ್ಲಿ ಜಮೀನಿನ‌ಲ್ಲಿನ ಮರಯೊಂದಕ್ಕೆ ರೈತನೊಬ್ಬ ನೇಣಿಗೆ ಶರಣಾದ ಘಟನೆ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ತಮ್ಮಯ್ಯ(60) ಮೃತಪಟ್ಟ ರೈತ ಈತನ ಹೆಸರನಲ್ಲಿದ್ದ ಒಂದೂವರೆ ಎಕರೆ ಜಮೀನಿನಲ್ಲಿ ಮೂರು ಬೋರ್ ವೆಲ್ ಕೊರೆಸಿದ್ದು ಎರಡು ವಿಫಲವಾಗಿ ಒಂದರಲ್ಲಿ ಸ್ವಲ್ವ ನೀರು ಬರುತ್ತಿದ್ದು ಕಳೆದ ಒಂದು ತಿಂಗಳುನಿಂದ ಅದರಲ್ಲೂ ನೀರು ಬಾರದೆ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈತ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50 ಸಾವಿರ ರೂ .ಸಾಲ, ಕೆನರಾ ಬ್ಯಾಂಕ್ ನಲ್ಲಿ ಒಡವೆ ಅಡವಿಟ್ಟು 1 ಲಕ್ಷ ರೂ ಸಾಲ . ಕೈ ಸಾಲ 2 ರಿಂದ 3 ಲಕ್ಷ ರೂ ಸಾಲ ಸೇರಿದಂತೆ 6 ಲಕ್ಷ ರೂ ಸಾಲ ಮಾಡಿದ್ದಾರೆ ಎನ್ನಲಾಗಿದೆ. ಮೃತ ತಮ್ಮಯ್ಯ ನಿಗೆ ಪತ್ನಿ ಜಯಮ್ಮ ಸೇರಿದಂತೆ ಎರಡು ಹೆಣ್ಣು ಒಂದು ಗಂಡು ಮಕ್ಕಳು ಇದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here