ಕ್ಷೇತ್ರದ ಯುವಕರಿಗೆ ಶೀಘ್ರ ಉದ್ಯೋಗ ಸೌಲಭ್ಯ

0
119

ಚಿಕ್ಕಬಳ್ಳಾಪುರ/ಗುಡಿಬಂಡೆ: ಉದ್ಯೋಗ ಹರಸಿ ಬೇರೆ ಪ್ರದೇಶಗಳಿಗೆ ಹೋಗುತ್ತಿರುವ ಗುಡಿಬಂಡೆ-ಬಾಗೇಪಲ್ಲಿ ಕ್ಷೇತ್ರದ ನಿರುದ್ಯೋಗಿಗಳಿಗೆ ಇದೇ  ಭಾಗದಲ್ಲಿ ಗಾರ್ಮೆಂಟ್ಸ್ ಸ್ಥಾಪನೆ ಮಾಡುವುದರ ಮೂಲಕ ಉದ್ಯೋಗ ಸೌಲಭ್ಯಗಳನ್ನು  ಒದಗಿಸ ಲಾಗುವು ದೆಂದು ಬಿಜೆಪಿ ಪಕ್ಷದ ಮುಖಂಡ ಹರಿಕೆರೆಕೃಷ್ಣಾರೆಡ್ಡಿ ತಿಳಿಸಿದರು.

ಪಟ್ಟಣದ ಭಾರತೀಯ ಜನತಾ ಪಕ್ಷದ ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅನೇಕ ಮುಂಖಡರು ಈ ಭಾಗದನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಾಗಿಆಶಾಸ್ವನೆ ನೀಡಿದ್ದಾರೆ ಆದರೆ ಯಾರು ಈ ಕೆಲಸ ಕೈಗೆತ್ತಿಕೊಂಡಿಲ್ಲ. ನಾನು ಶೀಘ್ರವಾಗಿಗಾರ್ಮೆಂಟ್ಸ್ ಕೈಗಾರಿಕೆಯನ್ನು ಸ್ಥಾಪನೆ ಮಾಡಿ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತೇನೆ. ಈಹಿಂದೆ ಕಾಂಗ್ರೇಸ್ ಪಕ್ಷದಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿದ್ದೇನೆ. ಆದರೆ ಕಾಂಗ್ರೇಸ್ಪಕ್ಷದಲ್ಲಿನ ಹಲವು ಆದರ್ಶಗಳು, ರೈತರ ಸಮಸ್ಯೆಗಳಿಗೆ ಸ್ಪಂಧಿಸಿದೇ ಇರುವುದು ಸೇರಿದಂತೆಅನೇಕ ಕಾರಣಗಳಿಗಾಗಿ ಬಿಜೆಪಿ ಪಕ್ಷ ಸೇರಿದ್ದೇನೆ ಎಂದರು.

ಕಾಂಗ್ರೇಸ್ ಸರ್ಕಾರ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವುದಾಗಿಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ಈವರೆಗೂ ಈಕಾರ್ಯಪೂರ್ಣಗೊಂಡಿಲ್ಲ.

ಈ ಭಾಗದ ಸಂಸದ ವೀರಪ್ಪ ಮೊಯ್ಲಿರವರು ಪ್ರತೀ ವರ್ಷ ಎತ್ತಿನಹೊಳೆನೀರು ೧ ವರ್ಷದಲ್ಲಿ ಬರುತ್ತೇ, ೨ ವರ್ಷದಲ್ಲಿ ಬರುತ್ತೇಎಂದು ಹೇಳುತ್ತಿದ್ದಾರೆ. ಆದರೆ ಅದೇಪಕ್ಷದ ಜನಾರ್ಧನ ಪೂಜಾರಿ ಮಾತ್ರ ಎತ್ತಿನಹೊಳೆ ಯೋಜನೆಗೆ ಅವಕಾಶ ನೀಡಲ್ಲ ಎಂದುಪ್ರತಿಭಟನೆ ಮಾಡುತ್ತಿದ್ದಾರೆ. ಈ ಗೊಂದಲವನ್ನು ನಿವಾರಿಸದ ಅವರು ಯಾವ ರೀತಿ ನೀರನ್ನುತರುತ್ತಾರೋ ಎಂದು ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡ ಜಿ.ಎಸ್.ನಾಗರಾಜ್, ಪಕ್ಷದತಾಲ್ಲೂಕು ಅಧ್ಯಕ್ಷ ರಾಜಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ತಿಮ್ಮಾರೆಡ್ಡಿ, ಗಂಗರೆಡ್ಡಿ,ಮುಖಂಡರಾದ ಪದ್ಮಾವತಮ್ಮ, ನಾಗರಾಜು, ಈಶ್ವರ್, ಮಂಜು, ಹನುಮಂತರೆಡ್ಡಿ  ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here