ಕನಸು ನನಸಾಗಿಸೋಣ

0
104

ಕೋಲಾರ:ಸಂವಿಧಾನಶಿಲ್ಪಿ ಬಾಬಾ ಸಾಹೇಬರ ಸಾಧನೆಗಳನ್ನ ಕೆಲವು ಅಂತ ಗುರ್ತಿಸುವುದಕ್ಕೆ ಸಾಧ್ಯವಿಲ್ಲ ಅವರ ಸಾಧನೆಗಳು ಈ ದೇಶಕ್ಕೆ ಅಪಾರ.ಜನತೆ ಇಂದು ಪ್ರತಿಯೊಂದು ಹಳ್ಳಿಗಳಲ್ಲೂ ಅವರ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಅವರ ಹೃದಯಲ್ಲಿ ನೆಲೆಸಿಕೊಂಡಿದ್ದಾರೆ.ಅಂತಹ ಮಹಾನ್ ವ್ಯಕ್ತಿಯ ಸಾಧನೆಗಳನ್ನು ಇಂದು ಅನೇಕ ರಾಷ್ಟ್ರಗಳು ಒಪ್ಪಿಕೊಳ್ಳುತ್ತಿವೆ.ಆದರೆ ನಾವು ಅಂತಹ ಅಪ್ರತಿಮ ಸಾಧಕರನ್ನ,ದಲಿತೋದ್ಧಾರಕರನ್ನ,ಸಮಾನತೆ ಹೋರಾಟಗಾರರನ್ನು ನಾವು ಕೇವಲ ಒಂದು ಜಾತಿ,ಪಂಗಡಕ್ಕೆ ಸೀಮಿತಗೊಳಿಸಿ ಅವರ ಸಮಾನತೆಯ ಕನಸನ್ನು ಕೇವಲ ಕನಸಾಗಿಯೇ ಉಳಿಸಿಕೊಳ್ಳುತ್ತಿದ್ದೇವೆ ಹೊರತು ನನಸಾಗಿಸುವ ಪ್ರಯತ್ನಕ್ಕೆ ಹೋಗುತ್ತಿಲ್ಲ.
ಎಂದು ಸಾಮಾಜಿಕ ನ್ಯಾಯ ಸೇವಾ ಸಮಿತಿ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬಾ ಸಾಹೇಬರ ೧೨೬ ನೇ ವರ್ಷದ ಜಯಂತಿಯನ್ನು ಉದ್ಘಾಟಿಸಿ ಅನಂತರವರು ಮಾತನಾಡಿದರು.ಈ ಸಂಧರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಾಗಾನಾಥ್ ಕೆಂಪರಾಜ್,ದಲಿತ ಮುಖಂಡರಾದ ಹೂಹಳ್ಳಿನಾಗರಾಜ್,ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಸ್.ಗಣೇಶ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here