ಕಾಲುಬಾಯಿ ರೋಗ ತಡೆಗಟ್ಟಲು ಜಾಗೃತಿ

0
120

ಚಿಕ್ಕಬಳ್ಳಾಪುರ/ಗುಡಿಬಂಡೆ: ರೈತರು ತಮ್ಮ ಜಾನುವಾರುಗಳಿಗೆ ಮುಂಜಾಗೃತವಾಗಿ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸಿಸುವುದರ ಮೂಲಕ ಈ ರೋಗವನ್ನು ತಡೆಗಟ್ಟಬಹುದು ಎಂದುಕೋಚಿಮುಲ್ ಶಿಭಿರ ಕಛೇರಿಯ ಉಪವ್ಯವಸ್ಥಾಪಕ ಡಾ.ವೀರಭದ್ರರೆಡ್ಡಿ ತಿಳಿಸಿದರು.

ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಸುಗಳಲ್ಲಿ ಕಂಡು ಬರುವ  ಭಯಂಕರ ಕಾಯಿಲೆಯಾದ ಕಾಲುಬಾಯಿ ರೋಗವನ್ನು ತಡೆಗಟ್ಟಲು ರೈತರುತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಳ ಬೇಕಿದೆ. ಈ ಲಸಿಕೆ  ಹಾಕುವುದರಿಂದ ಜಾನುವಾರುಗಳಲ್ಲಿ ರೋಗ  ನಿರೋಧಕ ಶಕ್ತಿ ಉತ್ಪತ್ತಿಯಾಗಿ ಆರೋಗ್ಯಕರ ವಾಗಿರಲು ಸಹಕಾರವಾಗುತ್ತದೆ. ಈ ಹಿಂದೆ  ರಾಜ್ಯದಲ್ಲಿ ತಲೆದೋರಿದ ಕಾಲುಬಾಯಿ ರೋಗಕ್ಕೆ  ಸುಮಾರು ಜಾನುವಾರುಗಳು ಮರಣ ಹೊಂದಿವೆ ಸರ್ಕಾರದ ಜೊತೆಗೆ ರೈತರೂ ಕೂಡ ಮುಂಜಾಗ್ರತೆ ಯಿಂದ ರೋಗ ಹರಡದಂತೆ ಹಾಗೂ ರೋಗಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ  ಮೂಲಕ ಈ ರೋಗವನ್ನು ತಡೆಗಟ್ಟಬೇಕು ಎಂದರು.

ನಂತರ ಮಾತನಾಡಿದ ಕೋಚಿಮುಲ್ ನಿರ್ದೇಶಕ ಕೆ.ಅಶ್ವತ್ಥರೆಡ್ಡಿ ರೈತರು ಸಾಕಾಣಿಕೆಮಾಡುತ್ತಿರುವ ರಾಸುಗಳಿಗೆ ಕಾಲುಬಾಯಿ ಜ್ವರವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಇದರಿಂದ ಸಾವಿರಾರು ಬೆಲೆ ಬಾಳುವ ರಾಸುಗಳಪ್ರಾಣವನ್ನು ರೋಗ ರುಜಿನಗಳಿಂದ ಉಳಿಸಬಹುದಾಗಿರುತ್ತದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡ ರೈತರು  ತಮ್ಮ ರಾಸುಗಳಲ್ಲಿ ಏನಾದರೂ ತೊಂದರೆ ಕಂಡುಬಂದರೇ ಕೂಡಲೇಪಶು ವೈದ್ಯರನ್ನು ಸಂಪರ್ಕಿಸಿ ಲಸಿಕೆ ಹಾಕಿಸಿ ತಮ್ಮ ರಾಸುಗಳ ಜೀವವನ್ನುಉಳಿಸಿಕೊಳ್ಳಬೇಕೆಂದರು.

ಈ ವೇಳೆ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ್, ಕೋಚಿಮುಲ್ಶಿಬಿರ ಕಛೇರಿಯ ವಿಸ್ತರಣಾಧಿಕಾರಿ ಮುನಿಶ್ಯಾಮಪ್ಪ, ಗುಡಿಬಂಡೆ ಹಾಲು ಉತ್ಪಾದಕರ ಸಹಕಾರ ಸಂಘದ  ಅಧ್ಯಕ್ಷ  ಹೆಚ್.ವೆಂಕಟೇಶಪ್ಪ, ಹೆಚ್.ಸಿ.ಕೃಷ್ಣಪ್ಪ, ರಂಗಪ್ಪ, ಉಮಾದೇವಿ,ಮಂಜುನಾಥ ದೀಕ್ಷಿತ್, ಕಾರ್ಯದರ್ಶಿ ಮಹಮದ್ ಜಿಲಾನಿ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here