ತಲಾಕ್ ಪದ್ಧತಿ ಮೀರಿ ನ್ಯಾಯಾಲಯದ ಮೊರೆ

1
273

ಬಳ್ಳಾರಿ /ಹೊಸಪೇಟೆ:ಮುಸ್ಲಿಂ ಸಮುದಾಯದ ತಲಾಕ್ ಪದ್ಧತಿ ಪ್ರತ್ಯೇಕ ಕಾನೂನಿನ ಬಗ್ಗೆ ದೇಶದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಇಂಥ ಸಂದರ್ಭದಲ್ಲಿಯೇ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮುಸ್ಲಿಂ ಕುಟುಂಬ ವೊಂದು ತಲಾಕ್ ಪದ್ಧತಿಯನ್ನು ಮೀರಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಜೆಸ್ಕಾಂ ನಿವೃತ್ತ ನೌಕರ ಬಿ ಅಬ್ದುಲ್ ಹಮೀದ್‌ಅವರ ಎರಡನೇ ಮಗಳಾದ ಮುಬೀನಾ ತಾಜ್, ತಲಾಕ್ ಪದ್ಧತಿಯನ್ನು ಮೀರಿ ನ್ಯಾಯಾಲಯದ ಮೆಟ್ಟಿಲು ಏರಿದ ಯುವತಿ. ತಲಾಖ್ ಅಂದ ಮೂರು ಸಾರಿ ಅಂದಕೂಡಲೇ ಮದುವೆ ಮುರಿದುಹೋಗಲ್ಲ, ನನ್ನ ಗಂಡ ನನಗೆ ಬೇಕು ಎಂದು ಇಲ್ಲಿನ ಕೌಟಂಬಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಹೌದು. ಎಲ್ಲವೂ ಸರಿಯಾಗಿದ್ದರೆ ಇಷ್ಟೊತ್ತಿಗೆ ಮದುವೆಯಾಗಿ ಎರಡು ವರುಷವಾಗಿರುತ್ತಿತ್ತು. ಆದರೆ ಮನಸು ಮುರಿದರೆ ಸಂಬಂಧಗಳಿಗೆ ಬೆಲೆ ಇರೋದೇ ಇಲ್ಲ. ಈ ಕಾರಣಕ್ಕೋ ನಗರದ ಮುಸ್ಲಿಂ ಕುಟುಂಬ ಸಾಕಷ್ಟು ನೋವನ್ನು ಉಂಡಿದೆ. ಜೆಸ್ಕಾಂ ನಿವೃತ್ತ ನೌಕರ ಬಿ ಅಬ್ದುಲ್ ಹಮೀದ್ ತನ್ನ ಎರಡನೇ ಮಗಳು ಮುಬೀನಾ ತಾಜ್ ರನ್ನು ಕಳೆದೆರಡು ವರುಷಗಳ ಹಿಂದೆ ತನ್ನ ಸ್ನೇಹಿತ ಇನಾಯುತ್ತಲ್ಲಾ ಖಾನ್ ಮಗ ಅಹ್ಮಮ ರಜಾಕ್ ಖಾನ್ ಜೊತೆ ಮದುವೆ ಮಾಡಿಕೊಟ್ಟರು. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿಯೇ ಮದುವೆಯಲ್ಲಿ ಬಿರುಕು ಕಾಣಿಸಿಕೊಂಡಿತು. ಸರಿಯಾಗಿ ಆರು ತಿಂಗಳು ಗಂಡನ ಮನೆಯಲ್ಲಿ ಸಂಸಾರ ಮಾಡಲು ಆಗದೇ ಮನೆ ಬಿಟ್ಟು ಬಂದಳು. ಪೊಲೀಸ್ ಮೊರೆ ಹೋದರೂ ಪ್ರಯೋಜವಾಗಲಿಲ್ಲ. ಮುಸ್ಲಿಂ ಧರ್ಮದ ಹಿರಿಯರು ಪಂಚಾಯ್ತಿ ಸೇರಿ ಗಂಡನ ಮೂಲಕ ಒಂದೇ ಬಾರಿ ಮೂರು ಬಾರಿ ತಲಾಕ್ ತಲಾಖ್ ತಲಾಕ್ ಎಂದೇಳಿ ಮದುವೆ ಮುರಿದೇ ಹೋಗಿದ್ದು ಕುಟುಂಬ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ. —–ಕೋಟ್——– ಇಷ್ಟೆಲ್ಲ ಆದರೂ ಗಂಡನ ಜೊತೆ ಸಂಸಾರ ಮಾಡಲು ಇಷ್ಟಪಡುವ ಮುಬೀನ್ ತಾಜ್ ತಲಾಕ್ ನೀಡಿದ್ರೂ ಒಪ್ಪಲಿಲ್ಲ. ಮುಸ್ಲಿಂ ಧರ್ಮದ ಪ್ರತ್ಯೇಕ ಕಾನೂನಿನ ಪ್ರಕಾರ ತಲಾಕ್ ಪದ್ಧತಿಯನ್ನು ನಿಯಮಾನುಸಾರಿ ಮೂರು ಬಾರಿ ಮಾಡಬೇಕು. ಆದರೆ ಒಂದೇ ಧರ್ಮಗುರುಗಳು ಅವಸರವಾಗಿ ಪಂಚಾಯ್ತಿಯಲ್ಲಿ ಒಂದೇ ಒಂದು ಬಾರಿ ಮೂರು ಸಾರಿ ತಲಾಕ್ ಎಂದೇಳಿ ಮದುವೆ ಮುರಿದುಬಿಟ್ಟರು, ಒತ್ತಾಯವಾಗಿ ಸಹಿ ಕೂಡ ಮಾಡಿಸಿಕೊಂಡರು ಎಂದು ಮುಬೀನ್ ತಂದೆ ಗಂಭೀರವಾಗಿ ಆರೋಪಿಸ್ತಾರೆ. ಪೊಲೀಸ್ ಠಾಣೆ ಮೊರೆ ಹೋದ್ರೂ ಉಪಯೋಗವಾಗಲಿಲ್ಲ. ಈ ಕಾರಣಕ್ಕೆ ಹೊಸಪೇಟೆ ನ್ಯಾಯಾಲಯದ ಮೆಟ್ಟಿಲು ಏರಿದ ಮೇಲೆ ಹೊಸಪೇಟೆ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ವರದಕ್ಷಿಣೆ, ಕಿರುಕುಳ ಕೇಸು ಕೂಡ ದಾಖಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸೌಜನ್ಯಕ್ಕೂ ನನ್ನನ್ನು ಒಂದು ಬಾರಿಯೂ ಮದುವೆ ನಿರಾಕರಣ ಬಗ್ಗೆ ಕೇಳದೇ ಗಂಡ ತಲಾಕ್ ಎಂದು ಮೂರು ಬಾರಿ ಹೇಳಿದ ಕೂಡಲೇ ಡಿವೋರ್ಸ್ ಎಂದೇಳಿದರೆ ಹೇಗೆ, ಇದನ್ನು ನಾನು ಒಪ್ಪುವುದಿಲ್ಲ, ಇದೀಗ ನ್ಯಾಯಾಲಯದ ನಂಬಿಕೆ ಯಿಟ್ಟಿದ್ದೇನೆ ಅಬ್ದುಲ್ ಹಮೀದ್ ಮುಬೀನ್ ತಾಜ್ ತಂದೆ ————

ಇನ್ನು ಗಂಡ ಅಹ್ಮದ್ ರಜಾಕ್ ಖಾನ್ ಸುತಾರಂ ಹೆಂಡತಿ ಮುಬೀನ್ ತಾಜ್ ಜೊತೆ ಸಂಸಾರ ಮಾಡಲು ಒಪ್ಪುತ್ತಿಲ್ಲ. ಈ ಕಾರಣಕ್ಕೆ ಹಿರಿಯರು, ಮುಸ್ಲಿಂ ಧರ್ಮದ ಪ್ರಕಾರ ತಲಾಕ್ ಪ್ರಕ್ರಿಯೆ ನಡೆಸಿದ್ದಾರೆ. ಆದರೆ ಇದು ನ್ಯಾಯಯುತವಾಗಿ ಮಾಡಿಲ್ಲವೆಂದು ಆರೋಪಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಯತ್ನಿಸಿದರೂ ಈ ಬಗ್ಗೆ ಸಂಪರ್ಕ ಸಾಧ್ಯವಾಗಿಲ್ಲ. ಆದರೆ ತಲಾಕ್ ಎಂದು ಮೂರು ಬಾರಿ ಹೇಳಿದ ಕೂಡಲೇ ಮದುವೆ ಮುರಿದು ಬೀಳಲ್ಲ, ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ನೊಂದ ಮುಬೀನ್ ತಾಜ್ ಕುಟುಂಬ. —–
ಮನೆಗೆಲಸ ಮಾಡಿಯಾದ್ರೂ ನನ್ನ ಗಂಡನ ನೋಡಿಕೊಳ್ತೇನೇ! ಅವರು ಬೇಕೇ ಬೇಕು! ಗಂಡ ತಲಾಕ್ ಅಂದ್ರೂ ನಾನು ಕಬೂಲ್ ಅನ್ನಲಿಲ್ಲ. ಮದುವೆ ನಿರಾಕರಣೆ ವಿರುದ್ಧ ಕೋರ್ಟ್ ಮೊರೆ ಹೋದ ನೊಂದ ಮುಸ್ಲಿಂ ಕುಟುಂಬ. ಆರು ತಿಂಗಳು ಸಂಸಾರ ಮಾಡಲಿಲ್ಲ, ತಲಾಕ್ ಕೊಟ್ರೆ ಒಪ್ಪಿಕೊಳ್ಳುವರಾರರು? ಸಮರ್ಪಕವಾಗಿ ತಲಾಕ್ ಪದ್ಧತಿ ಆಚರಿಸದೇ ಮೋಸವೆಂದು ಆರೋಪ?  ಮುಸ್ಲಿಂ ಧರ್ಮದಲ್ಲಿ ತಲಾಕ್ ಆಗಿದ್ದರೂ ಕೋರ್ಟ್ ನಲ್ಲಿ ಮುಂದುವರೆದ ವ್ಯಾಜ್ಯ.

1 COMMENT

LEAVE A REPLY

Please enter your comment!
Please enter your name here