ಉದ್ಯೋಗ ಮೇಳ

0
138

ಕೋಲಾರ: ಜಿಲ್ಲಾಡಳಿತ ಮತ್ತು ಬೈರೇಗೌಡ ಇಂಜೀನೀಯರಿಂಗ್ ಕಾಲೇಜು ಸಹಯೋಗದೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ಆಶಯದೊಂದಿಗೆ ಎರಡು ದಿನಗಳ ಉದ್ಯೋಗಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಉದ್ಘಾಟನಾ ಸಮಾರಂಭವನ್ನು ಉದ್ದೇಶಿ ಮಾತನಾಡಿದ ಸಚಿವ ದೇಶಪಾಂಡೆ ಕೋಲಾರದ ನಿರುದ್ಯೋಗಿಗಳಿಗೆ ಉದ್ಯೋಗಮೇಳದ ಅನಿವಾರ್ಯತೆ ಇದ್ದು,ಸದುಪಯೋಗಪಡಿಸಿಕೊಳ್ಳಬೇಕು.ಯಾವುದೇ ಕಂಪನಿಗೆ ಅವಕಾಶ ಸಿಕ್ಕಿದ್ದಲ್ಲಿ ನಿರ್ಲಕ್ಷಿಸದೆ,ಹೆಚ್ಚು ಆಪೇಕ್ಷೆಯನ್ನು ಪಡದೆ ಮೊದಲು ಕಾರ್ಯಕ್ಕೆ ಹಾಜರಾಗಿ ಉತ್ತಮ ಸೇವೆ ಸಲ್ಲಿಸಿ ಉನ್ನತ ಸ್ಥಾನಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಈ ಉದ್ಯೋಗಮೇಳಕ್ಕೆ ನಿಜವಾದ ಅರ್ಥ ಸಿಗುವುದು ಎಂದರು.

ಕಂಪನಿಗಳಿಗೆ ಹೋಗಲು ಆರ್ಥಿಕ ತೊಂದರೆ, ಅವಕಾಶ ಮತ್ತು ಮಾಹಿತಿ ಇರದೇ ಅವಕಾಶಗಳನ್ನು ಕೈಚೆಲ್ಲಿಕೊಳ್ಳುತ್ತಿದ್ದ ವಿದ್ಯಾವಂತ ನಿರುದ್ಯೋಗಿ ಹಳ್ಳಿಯ ಬಡ ಯುವಜನತೆಗೆ ತುಂಬಾ ಸಹಾಯವಾಗುತ್ತಿದೆ ಎಂದು ಅಲ್ಲಿನ ಉದ್ಯೋಗಾಂಕ್ಷಿಗಳು ಹೇಳಿದರು.

ಉದ್ಯೋಗ ಮೇಳದಲ್ಲಿ ಸುಮಾರು ೧೨ ಸಾವಿರ ನಿರುದ್ಯೋಗಿಗಳು ನೋಂದಣಿ ಮಾಡಿಸಿದ್ದು,೧೫೦ ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿರುತ್ತವೆ.ಆದರೆ ಈ ಮೇಳದಲ್ಲಿ ನೇರವಾಗಿ ಕಂಪನಿಗಳು ಪಾಲ್ಗೊಳ್ಳದೇ ಕಮೀಷನ್ಗಾಗಿ ಕೆಲಸ ಮಾಡುವ ಏಜೆನ್ಟ್ ಗಳು ಭಾಗವಹಿದ್ದು, ಅಭ್ಯರ್ಥಿಗಳಿಂದ ದಾಖಲೆಗಳನ್ನ ತೆಗೆದುಕೊಂಡು ಮತ್ತೆ ಕರೆ ಮಾಡುವುದಾಗಿ, ಮತ್ತೊಮ್ಮೆ ತಮ್ಮ ಕಚೇರಿಗೆ ಬರಬೇಕಾಗುತ್ತದೆ ಎಂದು ಹೇಳಿರುತ್ತಾರೆ.

ಏನೇ ಆದರೂ ಜಿಲ್ಲಾಡಳಿತ ಮತ್ತು ಸರ್ಕಾರ ದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ನಡೆಸಿದ ಉದ್ಯೋಗಮೇಳ ನಿರುಪಯೋಗವಾಗದೆ ಅನೇಕ ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲ ವಾಗಲಿ.ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾಧಿಕಾರಿ ತ್ರಿಲೋಕ್ ಚಂದ್ರ ಕೆ ವಿ ,ಜಿಲ್ಲಾಪಂಚಾಯತ್ ಸಿ ಇ ಓ ಕಾವೇರಿ, ಸಂಸದ ಕೆ ಎಚ್ ಮುನಿಯಪ್ಪ, ಶಾಸಕಿ ರಾಮಕ್ಕ,ಬೈರೇಗೌಡ ಕಾಲೇಜಿನ ಸುರೇಶ ರೆಡ್ಡಿ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಂಜಿನಪ್ಪ, ತೋರ ದೇವನದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿಎಂ.ನಾಗರಾಜ್,ಸಾವಿರಾರು ಅಭ್ಯರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here