ಕೆರೆ ಅಭಿವೃದ್ದಿಗೆ ಮೂರು ಕೋಟಿ

0
209

ಬೆಂಗಳೂರು/ ಕೃಷ್ಣರಾಜಪುರ: ರಾಮಮೂರ್ತಿ ನಗರ ವಾರ್ಡ್‍ನ ಕೌದೇನಹಳ್ಳಿ ಕೆರೆ ಅಭಿವೃದೀಗೆ 3‌ ಕೋಟಿ ವೆಚ್ಚ ಸರ್ಕಾರಕ್ಕೆ ಬೇಡಿಕೆಯಿಟ್ಟು ಅಭಿವೃದ್ಧಿ ಮಾಡಲಾಗುವುದೆಂದು ಶಾಸಕ ಬೈರತಿ ಬಸವರಾಜ್ ಭರವಸೆ ನೀಡಿದರು. ಇಲ್ಲಲಿನ ರಾಮಮೂರ್ತಿನಗರ ವಾರ್ಡ್‍ನ ಕೌದೇನಹಳ್ಳಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಯಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕೆರೆಯಲ್ಲಿ ಮಳೆ ಬಂದರೆ ವಾಕಿಂಗ್ ಮಾಡಲು ಆಗುವುದಿಲ್ಲ, ವಿದ್ಯುತ್ ದೀಪಗಳ ಸಮಸ್ಯೆ, ಭದ್ರತೆ ಸಮಸ್ಯೆ ಬಗ್ಗೆ ನಿವಾರಿಸುವಂತೆ ಮನವಿ ಮಾಡಿದ್ದು, ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ತಿಳಿಸಿದರು. ಕೆರೆಯಲ್ಲಿ ವಾಕಿಂಗ್ ಮಾಡಲು ಕಲ್ಲುಗಳನ್ನು ಅಳವಡಿಸಲು, ವಿದ್ಯುತ್ ದೀಪಗಳು, ಹಾಳಾಗಿರುವ ಪೆನ್ಸಿಂಗ್ ಸರಿಪಡಿಸಲು, ಮಕ್ಕಳ ಆಟವಾಡಲು ಚಿಕ್ಕದಾದ ಪಾರ್ಕ್, ಓಪನ್ ಜಿಮ್, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಆಗಬೇಕಿರುವ ಅಭಿವೃದ್ಧಿ ಕುರಿತು ಮೂರು ಕೋಟಿ ರೂ.ವೆಚ್ಚದಲ್ಲಿ ಎಸ್ಟಿಮೇಟ್ ತಯಾರಿಸಿ ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪೊಲೀಸರು ರಾತ್ರಿ ವೇಳೆಯಲ್ಲಿ ಮಪ್ತಿಯಲ್ಲಿ ಬಂದು ಪರಿಶೀಲನೆ ಮಾಡಿ ಈ ಕೆರೆಯಂಗಳದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದರೆ ವಶಕ್ಕೆ ತೆಗೆದುಕೊಂಡು ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಕೌದೇನಹಳ್ಳಿ ಕೆರೆಯನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ಕೋರ್ಟಿನ ಆದೇಶದಂತೆ ತೆರವುಗೊಳಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಕಸಾಪ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಎಂ.ನರೇಂದ್ರ, ಮುಖಂಡರಾದ ವೆಂಕಟೇಶ್, ನಾರಾಯಣಪ್ಪ, ಮುನಿಯಪ್ಪ, ನಂಜಪ್ಪ, ಹರೀಶ್, ಮುನೇಗೌಡ, ಚಂದ್ರಯ್ಯ, ಶಿವಪ್ಪ, ರವಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿಚಿತ್ರ 22ಕೆಆರ್‍ಪಿ 1ರಲ್ಲಿ ರಾಮಮೂರ್ತಿನಗರ ವಾರ್ಡ್‍ನ ಕೌದೇನಹಳ್ಳಿ ಕೆರೆ ಅಂಗಳದಲ್ಲಿ ಕೆಆರ್‍ಪುರ ಕೆರೆ ಮತ್ತು ಪರಿಸರ ಸಂರಕ್ಷಣಾ ಟ್ರಸ್ಟ್‍ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬೈರತಿ ಬಸವರಾಜ್ ಗಿಡಕ್ಕೆ ನೀರುಣ ಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here