ನಡುರಸ್ತೆಯಲ್ಲೇ…ಮಗುಚಿ ಬಿದ್ದ ಲಾರಿ

0
280

ಬಳ್ಳಾರಿ: ಕೆಎಸ್ಆರ್ಟಿಸಿ ಬಸ್ ಅಡ್ಡ ಬಂದ ಹಿನ್ನೆಲೆ-ಭತ್ತ ಹೊತ್ತೊಯ್ಯುತ್ತಿದ್ದ ಲಾರಿ ಧರೆಗೆ- ಡಿವೈಡರ್ ಗೆ ಡಿಕ್ಕಿ ಹೊಡೆದು ಮುಗುಚಿ ಬಿದ್ದ ಲಾರಿ-ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರು-ಹೈಮಾಸ್ಟ್ ಲೈಟ್ ಕಂಬ ಜಖಂ.ಕೆಎಸ್ ಆರ್ ಟಿಸಿ ಬಸ್ ಒಂದು ಏಕಾಏಕಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ನೆಲಕ್ಕುರುಳಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಶ್ರೀ ವಾಲ್ಮೀಕಿ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬಸ್ ಡಿಪೋ ಘಟಕ ಒಂದರಿಂದ ರಾತ್ರಿ ಎರಡರ ಸುಮಾರಿಗೆ ಆಚೆ ಬಂದ ಬಸ್ ನಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ಸುರಪುರ ತಾಲೂಕಿನ ಹುಣಶಿಗಿಯಿಂದ ಹೊರಟ ಲಾರಿಯಲ್ಲಿ ೩೭೫ ಕ್ವಿಂಟಾಲ್ ಭತ್ತದ ಮೂಟೆಗಳು ಇದ್ದವು. ಲಾರಿ ಚಾಲಕ ಕಸ್ತೂರೆಪ್ಪ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಡಿವೈಡರ್ ಗೆ ಲಾರಿ ಹರಿದಿದೆ. ಇದರ ಪರಿಣಾಮ ಹೈಮಾಸ್ಟ್ ದೀಪದ ಕಂಬ ಜಖಂ ಗೊಂಡಿದೆ. ಅದೃಷ್ಟವಶಾತ್ ಲಾರಿ ಚಾಲಕ ಕಸ್ತೂರೆಪ್ಪ ಮತ್ತು ಕ್ಲೀನರ್ ಸೋಮಶೇಖರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಧರಾಶಾಯಿಯಾಗಿ ಬಿದ್ದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ.ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here